ಬಂಟ್ವಾಳ, ಜನವರಿ 20, 2024 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 212/2017 ಕಲಂ 448, 395, 506 ಐಪಿಸಿ ಪ್ರಕರಣದ ಆರೋಪಿಯಾಗಿದ್ದು, ಕಳೆದ 6 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ತೊಕ್ಕೊಟ್ಟು ನಿವಾಸಿ ಮಹಮ್ಮದ್ ಇಕ್ಬಾಲ್ (36) ಎಂಬಾತನನ್ನು ಕೊಣಾಜೆ ಗ್ರಾಮದ ನೆತ್ತಿಲಪದವು ಎಂಬಲ್ಲಿಂದ ಶುಕ್ರವಾರ ಬಂಧಿಸುವಲ್ಲಿ ವಿಟ್ಲ ಪೊಲೀಸರು ಸಫಲರಾಗಿದ್ದಾರೆ.
ವಿಟ್ಲ ಪೊಲೀಸ್ ಠಾಣಾ ಎಎಸ್ಸೈ ಜಯರಾಮ, ಸಿಬ್ಬಂದಿಗಳಾದ ಪುನೀತ್ ಹಾಗೂ ವಿನೋದ್ ಎಂಬವರು ಕೊಣಾಜೆ ಠಾಣಾ ಪೊಲೀಸರ ಸಹಕಾರದಿಂದ ಈ ಬಂಧನ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಯನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
0 comments:
Post a Comment