ಧರ್ಮಸ್ಥಳ, ಜನವರಿ 19, 2024 (ಕರಾವಳಿ ಟೈಮ್ಸ್) : ಧರ್ಮಸ್ಥಳ ಪೆÇಲೀಸ್ ಠಾಣೆಯ ಅಕ್ರಮ ಜಾನುವಾರು ಸಾಗಾಟ ಪ್ರಕರಣದ ಆರೋಪಿಯಾಗಿ ಬಳಿಕ 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಹಾಸನ ಜಿಲ್ಲೆಯ ಹೊಳೆನರಸೀಪುರ ನಿವಾಸಿ ವಾಜೀದ್ ಪಾಷಾ (54) ಎಂಬಾತನನ್ನು ಬೆಳ್ತಂಗಡಿ ಪೆÇಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಹಾಗೂ ಧರ್ಮಸ್ಥಳ ಠಾಣಾ ಪಿಎಸ್ಸೈ ಗಳಾದ ಅನಿಲ್ ಕುಮಾರ್ ಡಿ ಹಾಗೂ ಸಮರ್ಥ ಆರ್ ಗಾಣಿಗೆರ ಅವರ ಮಾರ್ಗದರ್ಶನದಂತೆ ಧರ್ಮಸ್ಥಳ ಠಾಣಾ ಸಿಬ್ಬಂದಿಗಳಾದ ರಾಜೇಶ್ ಎನ್, ಗೋವಿಂದ ರಾಜ್, ಮಲ್ಲಿಕಾರ್ಜುನ್ ಅವರು ಹೊಳೆನರಸೀಪುರದಿಂದ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ ದಂಡ ವಿಧಿಸಿದೆ.
0 comments:
Post a Comment