ಬಂಟ್ವಾಳ, ಜನವರಿ 02, 2024 (ಕರಾವಳಿ ಟೈಮ್ಸ್) : ಬೈಕುಗಳೆರಡ ನಡುವೆ ನಡೆದ ಅಪಘಾತದಿಂದ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಾಣಿ ಗ್ರಾಮದ ಪೆರಾಜೆ ಎಂಬಲ್ಲಿ ಭಾನುವಾರ ನಡೆದಿದೆ.
ಗಾಯಗೊಂಡ ಬೈಕ್ ಸವಾರರನ್ನು ಪುತ್ತೂರು ಕಸಬ ಗ್ರಾಮದ ನಿವಾಸಿ ಪ್ರತೀಕ್ ಎಂ ಎಸ್ (30), ಭೀಮ್ ಪ್ರಶಾಂತ್ ಹಾಗೂ ಸಾವಿತ್ರಿ ಎಂದು ಹೆಸರಿಸಲಾಗಿದೆ.
ಪ್ರತೀಕ್ ಅವರು ತಮ್ಮ ಬೈಕಿನಲ್ಲಿ ಬರುತ್ತಿದ್ದ ವೇಳೆ ಮಾಣಿ ಗ್ರಾಮದ ಪೆರಾಜೆ ಎಂಬಲ್ಲಿ ಭೀಮ್ ಪ್ರಕಾಶ್ ಅವರು ಚಲಾಯಿಸಿಕೊಂಡು ಬಂದ ಬೈಕ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಘಟನೆಯಿಂದ ಬೈಕ್ ಸವಾರ ಪ್ರತೀಕ್ ಹಾಗೂ ಸಹಸವಾರಿಣಿ ಸಾವಿತ್ರಿ ಅವರು ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಾದರೆ, ಇನ್ನೋರ್ವ ಸವಾರ ಭೀಮ್ ಪ್ರಶಾಂತ್ ಅವರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment