ಸುಳ್ಯ, ಜನವರಿ 02, 2024 (ಕರಾವಳಿ ಟೈಮ್ಸ್) : ನಿಲ್ಲಿಸಿದ್ದ ಟಿಪ್ಪರ್ ಲಾರಿಯ ಬ್ಯಾಟರಿ ಕಳವುಗೈದ ಘಟನೆ ಸುಳ್ಯ ತಾಲೂಕು, ಕಲ್ಮಡ್ಕ ಗ್ರಾಮದ ಕಜೆ ಎಂಬಲ್ಲಿ ಸೋಮವಾರ (ಜ 1) ಬೆಳಕಿಗೆ ಬಂದಿದೆ.
ಈ ಬಗ್ಗೆ ಕಲ್ಮಡ್ಕ ಗ್ರಾಮದ ನಿವಾಸಿ ಇರ್ಷಾದ್ (21) ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇರ್ಶಾದ್ ಹಾಗೂ ಪುತ್ತೂರು ನಿವಾಸಿ ಕಿಶೋರ್ ಅವರ ಜೊತೆ ಪಾಲುದಾರಿಕೆಯಲ್ಲಿ 2023 ರಲ್ಲಿ ಖರೀದಿಸಿದ ಟಿಪ್ಪರ್ ಲಾರಿಯನ್ನು ಡಿ 31 ರಂದು ರಾತ್ರಿ ಕೆಲಸ ಮುಗಿಸಿ ಕಜೆ ಎಂಬಲ್ಲಿ ನಿಲ್ಲಿಸಿ ತೆರಳಿದ್ದಾರೆ. ಮರುದಿನ ಅಂದರೆ ಜನವರಿ 1 ರಂದು ಬೆಳಿಗ್ಗೆ ಬಂದು ನೋಡಿದಾಗ ಟಿಪ್ಪರ್ ಲಾರಿಯಲ್ಲಿದ್ದ ಸುಮಾರು 15 ಸಾವಿರ ರೂಪಾಯಿ ಮೌಲ್ಯದ ಅಮೋನ್ ಕಂಪೆನಿಯ 1 ಬ್ಯಾಟರಿ ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2024 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment