ಬೆಳ್ತಂಗಡಿ, ಜನವರಿ 03, 2024 (ಕರಾವಳಿ ಟೈಮ್ಸ್) : ಅಡಿಕೆ ವ್ಯಾಪಾರದ ಅಂಗಡಿಗೆ ಸ್ಕೂಟರಿನಲ್ಲಿ ಬಂದ ಅಪರಿಚಿತರು ಕ್ಯಾಶ್ ಡ್ರಾವರಿನಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಎಗರಿಸಿದ ಘಟನೆ ಪೂಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಡಂತ್ಯಾರು ಗ್ರಾಮದ ನಾವುಂಡ ಎಂಬಲ್ಲಿ ನಡೆದಿದೆ.
ಈ ಬಗ್ಗೆ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ £ವಾಸಿ ಟಿ ಪುಷ್ಪರಾಜ ಹೆಗ್ಡೆ (56) ಅವರು ಪೂಂಜಾಲಕಟ್ಟೆ ಠಾಣೆಗೆ ದೂರು £ೀಡಿದ್ದು, ಇವರು ಮಾಲಾಡಿ ಗ್ರಾಮದ ಮಡಂತ್ಯಾರು ನಾವುಂಡ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿರುವ ಪಾಸ್ಕಲ್ ಪಾಯಸ್ ಅವರ ಕಟ್ಟಡದಲ್ಲಿ ಅಗ್ಲಿಲಾ ಟ್ರೇಡರ್ಸ್ ಎಂಬ ಹೆಸರಿನ ಅಡಿಕೆ ವ್ಯಾಪಾರದ ಮಾಡುವ ಅಂಗಡಿಯನ್ನು ನಡೆಸುತ್ತಿದ್ದು, ಸದ್ರಿ ಅಂಗಡಿಗೆ ಸೋಮವಾರ ಬೆಳಿಗ್ಗೆ ಅಂಗಡಿಯಲ್ಲಿ ಕೆಲಸ ಮಾಡುವ ಇಸ್ಮಾಯಿಲ್ ಎಂಬವರಲ್ಲಿ ಕ್ಯಾಷ್ ಡ್ರಾವರ್ ಕೀ £ೀಡಿ, ಅನ್ಯ ಕೆಲಸದ £ಮಿತ್ತ ಹೊರಗೆ ಹೋಗಿದ್ದರು. ಮದ್ಯಾಹ್ನದ ವೇಳೆ ಅಂಗಡಿಯಲ್ಲಿ ಕೆಲಸ ಮಾಡುವ ಇಸ್ಮಾಯಿಲ್ ಎಂಬವರು ಇದ್ದ ವೇಳೆ ಯಾರೋ ಇಬ್ಬರು ಅಪರಿಚಿತರು ಸ್ಕೂಟರಿನಲ್ಲಿ ಅಂಗಡಿಗೆ ಬಂದು ಅಂಗಡಿಯಲ್ಲಿದ್ದವರ ಗಮನ ಬೇರೆಡೆಗೆ ಸೆಳೆದು ಕ್ಯಾಷ್ ಡ್ರಾವರಿನಲ್ಲಿದ್ದ ಹಣವನ್ನು ಕಳ್ಳತನ ಮಾಡಿರುತ್ತಾರೆ ಎಂಬುದಾಗಿ ತಿಳಿಸಿದ ಹಿನ್ನಲೆಯಲ್ಲಿ ಪುಷ್ಪರಾಜ್ ಅವರು ಅಂಗಡಿಗೆ ಬಂದು ಕ್ಯಾಶ್ ಡ್ರಾವರ್ ಪರಿಶೀಲಿಸಿದಾಗ ಕ್ಯಾಶ್ ಡ್ರಾವರಿನಲ್ಲಿದ್ದ ಒಟ್ಟು 2.31 ಲಕ್ಷ ರೂಪಾಯಿ ಹಣ ಕಳವಾಗಿರುವುದು ಕಂಡು ಬಂದಿದೆ ಎಂದು £ೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment