ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಿ ಸಂವಿಧಾನ ಉಳಿಸಲು ಯುವ ಜನತೆ ಸಂಘಟಿತರಾಗಿ : ಲೇಖಾ ಅಡವಿ ಕರೆ - Karavali Times ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಿ ಸಂವಿಧಾನ ಉಳಿಸಲು ಯುವ ಜನತೆ ಸಂಘಟಿತರಾಗಿ : ಲೇಖಾ ಅಡವಿ ಕರೆ - Karavali Times

728x90

28 January 2024

ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಿ ಸಂವಿಧಾನ ಉಳಿಸಲು ಯುವ ಜನತೆ ಸಂಘಟಿತರಾಗಿ : ಲೇಖಾ ಅಡವಿ ಕರೆ

ಬಂಟ್ವಾಳ, ಜನವರಿ 29, 2024 (ಕರಾವಳಿ ಟೈಮ್ಸ್) : ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‍ವಾದಿ, ಲೆನಿನ್ ವಾದಿ) ಲಿಬರೇಶನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ. ಧರ್ಮ, ಜಾತಿ, ಮತ-ಪಂಥದ ಆಧಾರದಲ್ಲಿ ಜನರನ್ನು ಒಡೆದಾಳುತ್ತಿರುವ ಪ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಿ. ಕಾಪೆರ್Çೀರೇಟ್ ಲೂಟಿ, ಕೋಮು ದ್ವೇಷ ಮತ್ತು ಸಾಮಾಜಿಕ ಗುಲಾಮಗಿರಿಯ ವಿರುದ್ಧ ಸಂಘರ್ಷ ತೀವ್ರಗೊಳಿಸಿ ಎಂಬ ಪಕ್ಷದ ಕೇಂದ್ರ ಸಮಿತಿಯ ಅಭಿಯಾನದ ಅಂಗವಾಗಿ ಬಿ ಸಿ ರೋಡಿನಲ್ಲಿ ವಿದ್ಯಾರ್ಥಿ ಯುವಜನರ ಸಮಾವೇಶ ಭಾನುವಾರ (ಜನವರಿ 28) ನಡೆಯಿತು.

ಸಮಾವೇಶ ಉದ್ಘಾಟಿಸಿದ ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯರು ಹಾಗೂ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎ ಐ ಎಸ್ ಎ) ರಾಜ್ಯ ಸಂಚಾಲಕಿ ಲೇಖಾ ಅಡವಿ ಅವರು ಮಾತನಾಡಿ, ಇಂದು ಈ ದೇಶದ ಸಂವಿಧಾನ ಅಪಾಯದಲ್ಲಿದ್ದು ಪ್ಯಾಶಿಸ್ಟ್ ಶಕ್ತಿಗಳು ಈ ದೇಶದ ಸಂವಿಧಾನವನ್ನು ನಾಶ ಮಾಡಿ ಮನು ಧರ್ಮ ಶಾಸ್ತ್ರವನ್ನು ಜಾರಿಗೆ ತರಲು ಹುನ್ನಾರ ನಡೆಸುತ್ತಿದ್ದಾರೆ. ಇದರ ವಿರುದ್ಧ ದೇಶದ ಜನತೆ ಪ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸುವ ಮೂಲಕ ಈ ದೇಶದ ಸಂವಿಧಾನವನ್ನು ಉಳಿಸುವಂತೆ ಕರೆ ನೀಡಿದರು.

ದೇಶದ ಸಾರ್ವಜನಿಕ ಉದ್ಯಮಗಳನ್ನು ಕಾಪೆರ್Çರೇಟ್ ಲೂಟಿಕೋರರಿಗೆ ಮಾರಾಟ ಮಾಡಲಾಗುತ್ತಿದೆ, ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ದೇಶದ ಕಾರ್ಮಿಕ ವರ್ಗಕ್ಕೆ ಅನ್ಯಾಯವೆಸಗಲಾಗಿದ್ದು ಕಾರ್ಮಿಕರ ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಿದರು. ಪ್ಯಾಶಿಸ್ಟ್ ಶಕ್ತಿಗಳ ಕೈಯಿಂದ ಈ ದೇಶವನ್ನು ರಕ್ಷಿಸಲು ವಿದ್ಯಾರ್ಥಿ, ಯುವಜನರು, ಕಾರ್ಮಿಕರು ಸಂಘಟಿತರಾಗಬೇಕೆಂದರು.

ಸಿ ಪಿ ಐ ಎಂ ಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯರು ಹಾಗೂ ಕ್ರಾಂತಿಕಾರಿ ಯುವಜನ ಒಕ್ಕೂಟ (ಆರ್ ವೈ ಎ) ರಾಜ್ಯ ಸಂಚಾಲಕ ಚೆನ್ನಯ್ಯ ಮಾತನಾಡಿ ದೇಶದ ವಿದ್ಯಾರ್ಥಿ ಯುವಜನತೆ ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಪ್ಯಾಶಿಸ್ಟ್ ಶಕ್ತಿಗಳು ವಿದ್ಯಾರ್ಥಿ ಯುವ ಜನತೆಯ ಮೇಲೆ ಧರ್ಮದ ಅಫೀಮನ್ನು ತುಂಬಿ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ದೇಶದಲ್ಲಿ ವಿದ್ಯಾರ್ಥಿ ಯುವಜನತೆ ತಮ್ಮ ನಿಜವಾದ ಸಮಸ್ಯೆಗಳನ್ನು ಗುರುತಿಸಿ ಹೋರಾಟವನ್ನು ನಡೆಸಬೇಕು ಎಂದರು.

ಪಕ್ಷದ ರಾಜ್ಯ ಸಮಿತಿ ಸದಸ್ಯ ಮೋಹನ್ ಕೆ ಇ, ರಾಜಾ ಚೆಂಡ್ತಿಮಾರ್ ಸಮಾವೇಶವನ್ನದ್ದೇಶಿಸಿ ಮಾತನಾಡಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಪ್ರಸ್ತಾವನೆಗೈದರು. ಪಕ್ಷದ ಮುಖಂಡರಾದ ತುಳಸೀದಾಸ್ ವಿಟ್ಲ, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಮುಖಂಡ ತಾಬೀಶ್ ಪುತ್ತೂರು ವಂದಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಿ ಸಂವಿಧಾನ ಉಳಿಸಲು ಯುವ ಜನತೆ ಸಂಘಟಿತರಾಗಿ : ಲೇಖಾ ಅಡವಿ ಕರೆ Rating: 5 Reviewed By: karavali Times
Scroll to Top