ಬಂಟ್ವಾಳ, ಜನವರಿ 30, 2024 (ಕರಾವಳಿ ಟೈಮ್ಸ್) : ಬಂಟ್ವಾಳ-ವಿದ್ಯಾಗಿರಿ ಇಲ್ಲಿನ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಬಿ ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
8 ವರ್ಷ ವಯೋಮಾನದೊಳಗಿನ ವಿಭಾಗದಲ್ಲಿ ಮನ್ವಿತ್ ಪಟೇಲ್ (ಕಟಾ ಪ್ರಥಮ), ಆದ್ಯಾ ಎಸ್ (ಕುಮಿಟೆ ಪ್ರಥಮ, ಕಟಾ ತೃತೀಯ), ವಿಹಾನ್ ಜಿ (ಕಟಾ ದ್ವಿತೀಯ, ಕುಮಿಟೆ ತೃತೀಯ), ಆರಾಧ್ಯ, ಹರ್ಷಿಣಿ, ಸಾನ್ವಿತಾ, ಮೊಹಮ್ಮದ್ ಸಾಬಿಕ್ (ಕಟಾ ತೃತೀಯ) ಬಹುಮಾನ ಪಡೆದಿರುತ್ತಾರೆ.
9 ವರ್ಷ ವಯೋಮಾನದೊಳಗಿನ ವಿಭಾಗದಲ್ಲಿ ಸಮ್ಮೇದ್ ಎಚ್ ಬಲ್ಲಾಳ್ (ಕಟಾ ತೃತೀಯ) ಮತ್ತು 11 ವರ್ಷ ವಯೊಮಾನದೊಳಗಿನ ವಿಭಾಗದಲ್ಲಿ ಹೀತ್ ಲೂಕ್ ವಾಸ್ (ಕಟಾ ಪ್ರಥಮ, ಕುಮಿಟೆ ತೃತೀಯ), ಲವಿತ್ ಎಚ್ ಹಾಗೂ ಭವಿಷ್ ಪಿ (ಕಟಾ ತೃತೀಯ) ಬಹುಮಾನವನ್ನು ಪಡೆದಿರುತ್ತಾರೆ.
12 ರಿಂದ 13 ವರ್ಷ ವಯೋಮಾನದೊಳಗಿನ ವಿಭಾಗದಲ್ಲಿ ತನ್ವಿ (ಕಟಾ ಪ್ರಥಮ, ಕುಮಿಟೆ ತೃತೀಯ), ಪ್ರಣಮ್ಯ (ಕುಮಿಟೆ ಪ್ರಥಮ, ಕಟಾ ತೃತೀಯ), ಲಾಲಿತ್ಯ ರಾಜ್ (ಕಟಾ ಪ್ರಥಮ, ಕುಮಿಟೆ ತೃತೀಯ), ತರ್ಷಿಣಿ (ಕಟಾ ತೃತೀಯ), ರಚನ್ ಸುವರ್ಣ (ಕಟಾ ಪ್ರಥಮ, ಕುಮಿಟೆ ತೃತೀಯ), ವಿಹಾರ್ ವೈ ಪೂಜಾರಿ (ಕಟಾ ತೃತೀಯ, ಕುಮಿಟೆ ತೃತೀಯ), ಪ್ರಖ್ಯಾತ್ ಶೆಟ್ಟಿ (ಕಟಾ ತೃತೀಯ), ಕೀರ್ತನ್ ಗಾಣಿಗ (ಕುಮಿಟೆ ತೃತೀಯ, ಕಟಾ ದ್ವಿತೀಯ) ಸ್ಥಾನ ಪಡೆದಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಯಮತೋ ಶೋಟೊ ಕಾನ್ ಕರಾಟೆ ಟ್ರಸ್ಟ್ ತರಬೇತುದಾರರಾದ ಅಶೋಕ್ ಆಚಾರ್ಯ ಮತ್ತು ಮಿಥುನ್ ರಾಜ್ ತರಬೇತಿ ನೀಡಿರುತ್ತಾರೆ.
ಇವರ ಸಾಧನೆಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ, ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್, ಬಂಟ್ವಾಳ ಎಸ್ ವಿ ಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ ರೇಖಾ ಶೆಣೈ, ಶಾಲಾ ಪ್ರಾಂಶುಪಾಲೆ ಶ್ರೀಮತಿ ಜೂಲಿ ಟಿ ಜೆ, ಶಿಕ್ಷಕ-ಶಿಕ್ಷಕೇತರ ವರ್ಗ ಹಾಗೂ ವಿದ್ಯಾರ್ಥಿ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆÉ.
0 comments:
Post a Comment