ಬಂಟ್ವಾಳ, ಜನವರಿ 10, 2024 (ಕರಾವಳಿ ಟೈಮ್ಸ್) : ನಿಲ್ಲಿಸಿದ್ದ ಕಂಟೈನರ್ ಲಾರಿಯನ್ನು ಒಮ್ಮೆಲೆ ಹಿಮ್ಮುಖ ಚಲಾಯಿಸಿದ ಪರಿಣಾಮ ಗ್ಯಾರೇಜ್ ಹಾಗೂ ಗ್ಯಾರೇಜ್ ಬಳಿ ನಿಲ್ಲಿಸಿದ್ದ ಎರಡು ಬೈಕುಗಳು ಜಖಂಗೊಂಡ ಘಟನೆ ಪೆರ್ನೆ ಗ್ರಾಮದ ಪೆರ್ನೆ ಜಂಕ್ಷನ್ ಶ್ರೀ ಶರವು ಅಟೋ ವಕ್ರ್ಸ್ ಬಳಿ ಸೋಮವಾರ ಸಂಜೆ ನಡೆದಿದೆ.
ಕಂಟೈನರ್ ಚಾಲಕ ಕೃತೇಶ್ ಅವರು ಶ್ರೀ ಶರವು ಅಟೋ ವಕ್ರ್ಸ್ ಬಳಿ ನಿಲ್ಲಿಸಿದ್ದ ಕಂಟೈನರ್ ಲಾರಿಯನ್ನು ಏಕಾಏಕಿ ಹಿಮ್ಮುಖ ಚಲಾಯಿಸಿದ ಪರಿಣಾಮ ಕಡೇಶ್ವಾಲ್ಯ ಗ್ರಾಮದ ನಿವಾಸಿ ಚಂದ್ರಶೇಖರ್ ಅವರಿಗೆ ಸೇರಿದ ಗ್ಯಾರೇಜಿಗೆ ನುಗ್ಗಿದ್ದು, ಪರಿಣಾಮ ಗ್ಯಾರೇಜ್ ಸಹಿತ ಅಲ್ಲೇ ನಿಲ್ಲಿಸಲಾಗಿದ್ದ ಎರಡು ಬೈಕುಗಳೂ ಜಖಂಗೊಂಡಿದೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment