ಬಂಟ್ವಾಳ, ಜನವರಿ 10, 2024 (ಕರಾವಳಿ ಟೈಮ್ಸ್) : ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಆಲಡ್ಕ-ಪಾಣೆಮಂಗಳೂರು ಹಾಗೂ ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆಯ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಫೆಬ್ರವರಿ 6 ರಂದು ಮಂಗಳವಾರ ರಾತ್ರಿ ಆಲಡ್ಕದಲ್ಲಿ ನಡೆಯುವ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ಇದರ ಪೊಸ್ಟರ್ ಬಿಡುಗಡೆ ಹಾಗೂ ಪ್ರಚಾರ ಅಭಿಯಾನಕ್ಕೆ ಮಿತ್ತಬೈಲಿನಲ್ಲಿ ಮರ್‍ಹೂಂ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಖಾಂ ಬಳಿ ಮಂಗಳವಾರ ರಾತ್ರಿ ಚಾಲನೆ ನೀಡಲಾಯಿತು.
ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಶಾದ್ ದಾರಿಮಿ ಅಲ್-ಜಝರಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಉಸ್ತಾದ್ ಟಿ ಎಂ ಹನೀಫ್ ಮುಸ್ಲಿಯಾರ್, ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾಧ್ಯಕ್ಷ ಇಸ್ಹಾಕ್ ಫ್ಯಾಶನ್ ವೇರ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಫೀಕ್, ಕೋಶಾಧಿಕಾರಿ ಹನೀಫ್ ಹಾಸ್ಕೋ, ಪದಾಧಿಕಾರಿಗಳಾದ ಅಬ್ದುಲ್ ಮುತ್ತಲಿಬ್, ಝುಬೈರ್ ಯು, ಬಶೀರ್ ಬೇಕರಿ, ಅಬ್ದುಲ್ ಸಲಾಂ ಕುಕ್ಕಾಜೆ, ಶಾಫಿ ಹಾಜಿ ಬಂಗ್ಲೆಗುಡ್ಡೆ, ಅಬ್ದುಲ್ ಖಾದರ್ ಪಿಬಿಎಚ್, ಅಬ್ದುಲ್ಲಾಹ್ ಶಾಝ್, ಶಾಹಿಲ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment