ಜೂಜಾಟ ಹಾಗೂ ಮಟ್ಕಾ ದಂಧೆ ಅಡ್ಡೆಗೆ ಬಂಟ್ವಾಳ ಪೊಲೀಸರ ದಾಳಿ : ಐವರ ಸೆರೆ - Karavali Times ಜೂಜಾಟ ಹಾಗೂ ಮಟ್ಕಾ ದಂಧೆ ಅಡ್ಡೆಗೆ ಬಂಟ್ವಾಳ ಪೊಲೀಸರ ದಾಳಿ : ಐವರ ಸೆರೆ - Karavali Times

728x90

12 January 2024

ಜೂಜಾಟ ಹಾಗೂ ಮಟ್ಕಾ ದಂಧೆ ಅಡ್ಡೆಗೆ ಬಂಟ್ವಾಳ ಪೊಲೀಸರ ದಾಳಿ : ಐವರ ಸೆರೆ

ಬಂಟ್ವಾಳ, ಜನವರಿ 12, 2024 (ಕರಾವಳಿ ಟೈಮ್ಸ್) : ಕಳ್ಳಿಗೆ ಗ್ರಾಮದ ರೈಲ್ವೆ ಟ್ರಾಕ್ ಬಳಿ ನಡೆಯುತ್ತಿದ್ದ ಜೂಜಾಟ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಕ್ರೈಂ ಎಸ್ಸೈ ನೇತೃತ್ವದ ಪೊಲೀಸರು ಮೂರು ಮಂದಿ ಆರೋಪಿಗಳ ಸಹಿತ ನಗದು-ಸೊತುಗಳನ್ನು ವಶಪಡಿಸಿಕೊಂಡಿದ್ದಾರೆ. 

ಬಂಧಿತ ಆರೋಪಿಗಳನ್ನು ಮೊಹಮ್ಮದ್ ರಿಯಾಝ್, ಅಬ್ದುಲ್ಲ ಹಾಗೂ ಅಬ್ದುಲ್ ಅಝೀಝ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 3,790/- ರೂಪಾಯಿ ನಗದು ಹಣ ಸಹಿತ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಿ ಸಿ ರೋಡಿನಲ್ಲಿ ವಾಹನಗಳ ನೋಂದಣಿ ಅಂಕಿ-ಸಂಖ್ಯೆಗಳ ಆಧಾರದಲ್ಲಿ ಮಟ್ಕಾ ಚೀಟಿ ಬರೆದು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪಿಎಸ್ಸೈ ರಾಮಕೃಷ್ಣ ನೇತೃತ್ವದ ಪೊಲೀಸರು ಇಬ್ಬರು ಆರೋಪಿಗಳ ಸಹಿತ ನಗದು-ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಮಂಜೇಶ್ವರ-ವರ್ಕಾಡಿ ಗ್ರಾಮದ ನಿವಾಸಿ ರಂಜನ್ ಹಾಗೂ ಮಂಗಳೂರು-ಆಕಾಶಭವನ ನಿವಾಸಿ ಸುರೇಶ್ ಎಚ್ ಶೆಟ್ಟಿ ಎಂಬವರೇ ಬಂಧಿತ ಮಟ್ಕಾ ದಂಧೆಕೋರರು. ಆರೋಪಿಗಳಿಂದ 2010/- ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಜೂಜಾಟ ಹಾಗೂ ಮಟ್ಕಾ ದಂಧೆ ಅಡ್ಡೆಗೆ ಬಂಟ್ವಾಳ ಪೊಲೀಸರ ದಾಳಿ : ಐವರ ಸೆರೆ Rating: 5 Reviewed By: karavali Times
Scroll to Top