ಬಂಟ್ವಾಳ, ಜನವರಿ 17, 2024 (ಕರಾವಳಿ ಟೈಮ್ಸ್) : ಕಲ್ಲು ಕೋರೆಯ ಬಗ್ಗೆ ದೂರು ನೀಡಿದ ಕಾರಣಕ್ಕಾಗಿ ವ್ಯಕ್ತಿಯೊಬ್ಬರಿಗೆ ಮೂವರ ತಂಡ ಹಲ್ಲೆ ನಡೆಸಿದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮ್ಟೂರು ಗ್ರಾಮದ ನಿವಾಸಿ ಅಬ್ದುಲ್ ಮಜೀದ್ (48) ಎಂಬವರು ಈ ಬಗ್ಗೆ ಪೆÇಲೀಸರಿಗೆ ದೂರು ನೀಡಿದ್ದು, ಸೋಮವಾರ ಬೆಳಿಗ್ಗೆ ಪಾಣೆಮಂಗಳೂರು ಗ್ರಾಮದ, ಮೆಲ್ಕಾರ್ ಆರ್ ಟಿ ಒ ಕಛೇರಿ ಬಳಿಯಿರುವ ಮೈದಾನದಲ್ಲಿ ಆರೋಪಿಗಳಾದ ಇಕ್ಬಾಲ್ ಅಲಿಯಾಸ್ ಪವನ್ ಇಕ್ಬಾಲ್, ಅಬ್ದುಲ್ ಹಮೀದ್ ಹಾಗೂ ಹಕೀಂ ಎಂಬವರುಗಳು ಮಜೀದ್ ಅವರನ್ನು ತಡೆದು ನಿಲ್ಲಿಸಿ, ಕಲ್ಲು ಕೋರೆಯ ಬಗ್ಗೆ ದೂರು ನೀಡಿದ ಬಗ್ಗೆ ತಕರಾರು ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುತ್ತಾರೆ. ಈ ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರು ಹಲ್ಲೆಯನ್ನು ತಡೆದಿದ್ದು, ಈ ವೇಳೆ ಆರೋಪಿಗಳು ಮಜೀದ್ ಅವರಿಗೆ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2024 ಕಲಂ 341, 504, 323, 506 ಜೊತೆಗೆ 34 ಐಪಿಸಿಯಂತೆ ಪ್ರಕಣ ದಾಖಲಾಗಿದ್ದು, ಪೆÇಲೀಸರು ತ£ಖೆ ಕೈಗೊಂಡಿದ್ದಾರೆ.
0 comments:
Post a Comment