ಪುತ್ತೂರು, ಜನವರಿ 20, 2024 (ಕರಾವಳಿ ಟೈಮ್ಸ್) : ಗ್ಯಾರೇಜಿಗೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವುಗೈದ ಘಟನೆ ಪುತ್ತೂರು ತಾಲೂಕಿನ ಇರ್ದೆ ಜಂಕ್ಷನ್ನಿನಲ್ಲಿ ಗುರುವಾರ ರಾತ್ರಿ ನಡೆದಿದೆ.
ಪ್ರಸಾದ್ ಎಂಬವರಿಗೆ ಸೇರಿದ ಗ್ಯಾರೇಜಿನಲ್ಲಿ ಈ ಕಳವು ಕೃತ್ಯ ನಡೆದಿದ್ದು, ಇವರು ಗುರುವಾರ ಸಂಜೆ ಗ್ಯಾರೇಜಿಗೆ ಬೀಗ ಹಾಕಿ ಮನೆಗೆ ತೆರಳಿದ್ದು, ತಡರಾತ್ರಿ ಸಮಯ ಗ್ಯಾರೇಜ್ ಬಾಗಿಲು ತೆರೆದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ತಕ್ಷಣ ಸ್ಥಳಕ್ಕೆ ತೆರಳಿ ನೋಡಿದಾಗ, ಗ್ಯಾರೇಜಿನ ಬೀಗ ಮುರಿದು ಬಾಗಿಲು ತೆರೆದಿದ್ದು, ಅಂದಾಜು 69,800/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವುದು ಕಂಡುಬಂದಿದೆ.
ಈ ಬಗ್ಗೆ ಪ್ರಸಾದ್ ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment