ಬಂಟ್ವಾಳದಲ್ಲಿ ಭೀಕರ ಅಗ್ನಿ ಅವಘಡ : ಬೆಂಕಿ ಹಾಗೂ ದಟ್ಟ ಹೊಗೆಯ ಮಧ್ಯೆ ಸಿಲುಕಿ ವೃದ್ದ ದಂಪತಿ ಸಜೀವ ದಹನ - Karavali Times ಬಂಟ್ವಾಳದಲ್ಲಿ ಭೀಕರ ಅಗ್ನಿ ಅವಘಡ : ಬೆಂಕಿ ಹಾಗೂ ದಟ್ಟ ಹೊಗೆಯ ಮಧ್ಯೆ ಸಿಲುಕಿ ವೃದ್ದ ದಂಪತಿ ಸಜೀವ ದಹನ - Karavali Times

728x90

28 January 2024

ಬಂಟ್ವಾಳದಲ್ಲಿ ಭೀಕರ ಅಗ್ನಿ ಅವಘಡ : ಬೆಂಕಿ ಹಾಗೂ ದಟ್ಟ ಹೊಗೆಯ ಮಧ್ಯೆ ಸಿಲುಕಿ ವೃದ್ದ ದಂಪತಿ ಸಜೀವ ದಹನ

ಬಂಟ್ವಾಳ, ಜನವರಿ 29, 2024 (ಕರಾವಳಿ ಟೈಮ್ಸ್) : ಇಲ್ಲಿನ ಲೊರೆಟ್ಟೊಪದವು ಸಮೀಪದ ತುಂಡುಪದವು ಎಂಬಲ್ಲಿ ಮನೆ ಸಮೀಪದ ಜಮೀನಿಗೆ ಬಿದ್ದ ಬೆಂಕಿ ನಂದಿಸಲು ತೆರಳಿದ ವೃದ್ದ ದಂಪತಿ ಬೆಂಕಿ ಹಾಗೂ ದಟ್ಟ ಹೊಗೆಯ ನಡುವೆ ಸಿಲುಕಿ ದಹನಗೊಂಡ ಘಟನೆ ಭಾನುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. 

ಮೃತ ದಂಪತಿಯನ್ನು ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲೊರೆಟ್ಟೊಪದವು-ತುಂಡುಪದವು £ವಾಸಿಗಳಾದ ಗಿಲ್ಬರ್ಟ್ ಕಾರ್ಲೊ (75) ಹಾಗೂ ಅವರ ಪತ್ನಿ ಕ್ರಿಸ್ಟಿನ್ ಕಾರ್ಲೊ (70) ಎಂದು ಗುರುತಿಸಲಾಗಿದೆ. 

ದಂಪತಿಯ ಮೂವರು ಪುತ್ರಿಯರ ಪೈಕಿ ಇಬ್ಬರು ಹೊರದೇಶದಲ್ಲಿ ಉದ್ಯೋಗದಲ್ಲಿದ್ದು ಒಬ್ಬರು ಮಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ ಎನ್ನಲಾಗಿದೆ. ಭಾನುವಾರ ಮನೆಯಲ್ಲಿ ಇಬ್ಬರೇ ಇದ್ದು ಮಧ್ಯಾಹ್ನ ವೇಳೆಗೆ ಮನೆ ಸಮೀಪದ ಜಾಗದಲ್ಲಿದ್ದ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ದಂಪತಿ ಬೆಂಕಿ ನಂದಿಸಲು ಸ್ಥಳಕ್ಕೆ ತೆರಳಿದ ವೇಳೆ ದಟ್ಟ ಹೊಗೆ ಹಾಗೂ ಬೆಂಕಿಯ ನಡುವೆ ಸಿಲುಕಿ ಉಸಿರುಗಟ್ಟಿ ಅಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಅವರಿಬ್ಬರ ಮೇಲೂ ಬೆಂಕಿ ಆವರಿಸಿದ ಪರಿಣಾಮ ಸಜೀವ ದಹನಗೊಂಡಿದ್ದಾರೆ ಎನ್ನಲಾಗಿದೆ, 

ಘಟನೆ ನಡೆದಿರುವುದು ಸ್ಥಳೀಯರ ಗಮನಕ್ಕೂ ಬರುವಾಗ ತಡವಾಗಿದ್ದು, ಅದಾಗಲೇ ಇಬ್ಬರು ಬೆಂಕಿಗೆ ಆಹುತಿಯಾಗಿದ್ದಾರೆ. ಬಳಿಕ ಸ್ಥಳೀಯರು ಬೆಂಕಿ ನಂದಿಸಿದ್ದು, ಘಟನಾ ಸ್ಥಳಕ್ಕೆ ಪೆÇಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪೆÇಲೀಸರ ತನಿಖೆ ಮುಂದುವರಿದಿದೆ. ಈ ಬಗ್ಗೆ ದಂಪತಿಯ ಸಂಬಂಧಿ ನೋರ್ಬರ್ಟ್ ತರೇರ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಭೀಕರ ಅಗ್ನಿ ಅವಘಡ : ಬೆಂಕಿ ಹಾಗೂ ದಟ್ಟ ಹೊಗೆಯ ಮಧ್ಯೆ ಸಿಲುಕಿ ವೃದ್ದ ದಂಪತಿ ಸಜೀವ ದಹನ Rating: 5 Reviewed By: karavali Times
Scroll to Top