ನವದೆಹಲಿ, ಜನವರಿ 16, 2024 (ಕರಾವಳಿ ಟೈಮ್ಸ್) : ದೇಶಾದ್ಯಂತ ಸದ್ಯ ಟೋಲ್ ಬೂತ್‍ಗಳಲ್ಲಿ ನಗದು ಪಾವತಿ ವ್ಯವಸ್ಥೆ ಇರುವುದಿಲ್ಲ. ಎಲ್ಲವೂ ಫಾಸ್ಟಾಗ್ ಮೂಲಕವೇ ಪಾವತಿ ವ್ಯವಸ್ಥೆ ಮಾಡಲಾಗಿದೆ. ಇದೀಗ ರಾಷ್ಟ್ರೀಯ ಹೆದ್ದಾರಿ ಇಲಾಖೆ ವಾಹನ ಸವಾರರಿಗೆ ತಮ್ಮ ಫಾಸ್ಟಾಗ್ ನ್ನು ಕೆವೈಸಿ ಮಾಡಿಸುವಂತೆ ಆದೇಶ ಹೊರಡಿಸಿದೆ. ಜನವರಿ 31ರೊಳಗೆ ನಿಮ್ಮ ಫಾಸ್ಟಾಗ್ ಕೆವೈಸಿ ಮಾಡದೆ ಇದ್ದಲ್ಲಿ ಫಾಸ್ಟಾಗ್ ನಿಷ್ಕ್ರಿಯಗೊಳ್ಳಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿ ಪ್ರಕಾರ, ಪ್ರತಿ ಫಾಸ್ಟಾಗ್ ನೋ ಯುವರ್ ಕಸ್ಟಮರ್ (ಕೆವೈಸಿ) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಫಾಸ್ಟಾಗ್ ಖರೀದಿ ವೇಳೆ ಅಗತ್ಯ ದಾಖಲೆ ನೀಡಿ ಕವೈಸಿ ಮಾಡಿಸಿದ್ದರೆ ಮತ್ತೊಮ್ಮೆ ಮಾಡುವು ಅಗತ್ಯವಿಲ್ಲ. ಆದರೆ ಕೆವೈಸಿ ಮಾಡಿಸದಿದ್ದರೆ, ಜನವರಿ 31ರ ಬಳಿಕ ನಿಮ್ಮ ಫಾಸ್ಟಾಗ್ ಬ್ಲಾಕ್ ಲಿಸ್ಟ್ ಸೇರಿಕೊಳ್ಳಲಿದೆ. ಇದರಿಂದ ಟೋಲ್ ಗೇಟ್‍ಗಳಲ್ಲಿ ವಾಹನದ ಫಾಸ್ಟಾಗ್ ಕಾರ್ಯನಿರ್ವಹಿಸುವುದಿಲ್ಲ.
ಒಂದು ವಾಹನ ಒಂದು ಫಾಸ್ಟಾಗ್ ನಿಯಮ ಜಾರಿಗೊಳಿಸಿದ ಎನ್ ಎಚ್ ಎ ಐ ಟೋಲ್ ಗೇಟ್‍ಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿತ್ತು. ಆದರೆ ಕೆಲ ಫಾಸ್ಟಾಗ್‍ಗಳು ಹಲವು ವಾಹನಗಳಲ್ಲಿ ಬಳಕೆಯಾಗಿದೆ. ಅಷ್ಟೇ ಅಲ್ಲ ಕೆಲ ವಾಹನದಲ್ಲಿ ಹಲವು ಫಾಸ್ಟಾಗ್ ಬಳಕೆ ಮಾಡಲಾಗಿದೆ. ಈ ರೀತಿಯ ಹಲವು ಸಮಸ್ಯೆಗಳನ್ನು ಹಾಗೂ ವಾಹನ ಟ್ರಾಕ್ ಸೂಕ್ತವಾಗಿ ಮಾಡಲು ಒಂದು ವಾಹನ ಒಂದು ಫಾಸ್ಟಾಗ್ ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿ ಕೆವೈಸಿ ಇದೀಗ ಕಡ್ಡಾಯವಾಗಿದೆ.
ದೇಶದ ಶೇಕಡಾ 98 ರಷ್ಟು ವಾಹನಗಳು ಫಾಸ್ಟಾಗ್ ಅಳವಡಿಸಿಕೊಂಡಿದೆ. ಆದರೆ ಬಹುತೇಕ ವಾಹನದ ಫಾಸ್ಟಾಗ್ ಕೆವೈಸಿ ಮಾಡಿಲ್ಲ. ಒಂದು ವಾಹನದ ಫಾಸ್ಟಾಗ್‍ನ್ನು ಹಲವು ವಾಹನ ಸವಾರರು ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸುರಕ್ಷತೆ ಹಾಗೂ ಇತರ ಕಾರಣಗಳಿಂದ ಇದೀಗ ಫಾಸ್ಟಾಗ್ ನಿಯಮಗಳನ್ನು ಮರು ಪರಿಶೀಲನೆ ಮಾಡಲಾಗಿದೆ.
ಕೆವೈಸಿ ಮಾಡದ ಫಾಸ್ಟಾಗ್ ಜನವರಿ 31 ರ ಬಳಿಕ ಕಾರ್ಯನಿರ್ವಹಿಸುವುದಿಲ್ಲ. ನಿಮ್ಮ ಫಾಸ್ಟಾಗ್ ಖಾತೆಯಲ್ಲಿ ಸಾಕಷ್ಟು ಮೊತ್ತ ಬಾಕಿ ಇದ್ದರೂ ಫಾಸ್ಟಾಗ್ ಕಾರ್ಯನಿರ್ವಹಿಸುದಿಲ್ಲ. ಇದಕ್ಕಾಗಿ ವಾಹನ ಸವಾರರು ತಕ್ಷಣ ತಮ್ಮ ಫಾಸ್ಟಾಗ್ ಕೆವೈಸಿ ಮಾಡಿಸಿಕೊಂಡು ಸಿದ್ದರಾಗಬೇಕಿದೆ.
0 comments:
Post a Comment