ಬಂಟ್ವಾಳ, ಜನವರಿ 13, 2024 (ಕರಾವಳಿ ಟೈಮ್ಸ್) : ಟೆಲಿಗ್ರಾಂ ಆಪ್ ಮೂಲಕ ಹಣ ಗಳಿಸುವ ಮೋಸದ ಜಾಲಕ್ಕೆ ಬಿದ್ದ ವ್ಯಕ್ತಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗೋಳ್ತಮಜಲು ಗ್ರಾಮದ ಉಮೈರ್ (30) ಎಂಬವರೇ ಮೋಸದ ಜಾಲಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ವ್ಯಕ್ತಿ. ಉಮೈರ್ ಅವರಿಗೆ ಕಳೆದ ನವಂಬರ್ 11 ರಂದು ಟೆಲಿಗ್ರಾಂ ಆಪ್ ಮೂಲಕ ಅಪರಿಚಿತ ಸಂಖ್ಯೆಯಿಂದ ನಿಮಗೆ ದಿನನಿತ್ಯ ಹಣ ಗಳಿಸುವ ಉದ್ದೇಶವಿದ್ದಲ್ಲಿ ನಮ್ಮ ಗ್ರೂಪಿಗೆ ಜಾಯಿನ್ ಆಗಿ ಎಂಬ ಸಂದೇಶ ಬಂದಿದೆ. ಉಮೈರ್ ಅವರು ಸದ್ರಿ ಗ್ರೂಪಿಗೆ ಜಾಯಿನ್ ಆಗಿ ಗ್ರೂಪ್ ನೀಡಿದ ಟಾಸ್ಕ್ ಗಳನ್ನು ಕಂಪ್ಲೀಟ್ ಮಾಡಿ, ಬಳಿಕ 7 ಸಾವಿರ ರೂಪಾಯಿ ಟಾಸ್ಕ್ ಸೆಲೆಕ್ಟ್ ಮಾಡಿದಾಗ 7 ಸಾವಿರ ನೀಡಬೇಕಾದಲ್ಲಿ 25 ಸಾವಿರ ರೂಪಾಯಿ ಪಾವತಿಸಬೇಕು ಎಂದು ಹೇಳಿದಂತೆ ಉಮೈರ್ ಅವರು ಹಂತ ಹಂತವಾಗಿ 2 ಲಕ್ಷದ 9 ಸಾವಿರ ರೂಪಾಯಿ ಹಣ ಪಾವತಿ ಮಾಡಿದ್ದಾರೆ.
ಆದರೆ ಅಪರಿಚಿತ ಆರೋಪಿತ ವ್ಯಕ್ತಿಗಳು ಉಮೈರ್ ಅವರ ಹಣವನ್ನು ವಾಪಾಸು ನೀಡದೆ ಮೋಸ ಮಾಡಿ ವಂಚಿಸಿರುತ್ತಾರೆ ಎಂದು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2024 ಕಲಂ 66 (ಸಿ), 66 (ಡಿ) ಐಟಿ ಕಾಯಿದೆ ಹಾಗೂ ಕಲಂ 419, 420 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment