ಬಂಟ್ವಾಳ, ಜನವರಿ 26, 2024 (ಕರಾವಳಿ ಟೈಮ್ಸ್) : ಜೆಸಿಐ ಜೋಡುಮಾರ್ಗ ನೇತ್ರಾವತಿ ಇದರ 2024ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜನವರಿ 27 ರಂದು ಶನಿವಾರ (ನಾಳೆ) ಸಂಜೆ 6.30ಕ್ಕೆ ಬಿ ಸಿ ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜೆಸಿಐ ಪಿಪಿಪಿ ಸಂತೋಷ್ ಜಿ, ಬಿ ಸಿ ರೋಡು ಅಪೂರ್ವ ಜ್ಯುವೆಲ್ಲರ್ಸ್ ಮಾಲಕ ಸುನಿಲ್ ಬಿ, ಜೆ ಎಫ್ ಎಂ ಸನತ್ ಕುಮಾರ್ ನಾಯಕ್ ಅವರು ಭಾಗವಹಿಸಲಿದ್ದಾರೆ. ಇದೇ ವೇಳೆ ಜೋಡುಮಾರ್ಗ ನೇತ್ರಾವತಿ ಜೆಸಿಐ ಇದರ 2024ನೇ ಸಾಲಿನ ನೂತನ ಅಧ್ಯಕ್ಷ ಜೇಸಿ ಎಂ ಸುಬ್ರಹ್ಮಣ್ಯ ಪೈ ಅವರ ನೇತೃತ್ವದ ಪದಾಧಿಕಾರಿಗಳ ತಂಡ ಪದಗ್ರಹಣ ನಡೆಸಲಿದ್ದಾರೆ ಎಂದು ನೂತನ ಅಧ್ಯಕ್ಷ ಜೇಸಿ ಎಂ ಸುಬ್ರಹ್ಮಣ್ಯ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment