ಆಲಡ್ಕ ಎಸ್.ಕೆ.ಎಸ್.ಎಸ್.ಎಫ್. ದಶವಾರ್ಷಿಕ ಸಂಭ್ರಮ ಪ್ರಯುಕ್ತ ಫೆಬ್ರವರಿ 6 ರಂದು ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ - Karavali Times ಆಲಡ್ಕ ಎಸ್.ಕೆ.ಎಸ್.ಎಸ್.ಎಫ್. ದಶವಾರ್ಷಿಕ ಸಂಭ್ರಮ ಪ್ರಯುಕ್ತ ಫೆಬ್ರವರಿ 6 ರಂದು ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ - Karavali Times

728x90

25 January 2024

ಆಲಡ್ಕ ಎಸ್.ಕೆ.ಎಸ್.ಎಸ್.ಎಫ್. ದಶವಾರ್ಷಿಕ ಸಂಭ್ರಮ ಪ್ರಯುಕ್ತ ಫೆಬ್ರವರಿ 6 ರಂದು ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ

ಬಂಟ್ವಾಳ, ಜನವರಿ 25, 2024 (ಕರಾವಳಿ ಟೈಮ್ಸ್) : ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಹಾಗೂ ಎಸ್ ಕೆ ಎಸ್ ಎಸ್ ಎಫ್ ಆಲಡ್ಕ ಶಾಖೆ ಇದರ ದಶ ವಾರ್ಷಿಕ ಸಂಭ್ರಮದ ಪ್ರಯುಕ್ತ ಉಸ್ತಾದ್ ವಲಿಯುದ್ದೀನ್ ಫೈಝಿ ವಾಯಕ್ಕಾಡ್-ಕೇರಳ ಅವರ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮವು ಫೆಬ್ರವರಿ 6 ರಂದು ಮಂಗಳವಾರ ರಾತ್ರಿ ಇಲ್ಲಿನ ಸಜಿಪ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ. 

ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ ಅವರು ದುವಾಶಿರ್ವಚನಗೈಯಲಿದ್ದು, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಕೆ ಪಿ ಇರ್ಶಾದ್ ದಾರಿಮಿ ಅಲ್-ಜಝರಿ ಅವರು ಉದ್ಘಾಟಿಸುವರು. ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾಧ್ಯಕ್ಷ ಮುಹಮ್ಮದ್ ಇಶಾಕ್ ಅಧ್ಯಕ್ಷತೆ ವಹಿಸುವರು. 

ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ, ನಂದಾವರ ಕೇಂದ್ರ ಜುಮಾ ಮಸೀದಿ ಖತೀಬ್ ಖಾಸಿಂ ದಾರಿಮಿ, ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ಖತೀಬ್ ಉಸ್ಮಾನ್ ರಾಝಿ ಬಾಖವಿ, ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಖತೀಬ್ ಹಸ್ವೀಫ್ ದಾರಿಮಿ, ನೆಹರುನಗರ ಬದ್ರಿಯಾ ಜುಮಾ ಮಸೀದಿ ಖತೀಬ್ ಸಲಾಂ ಇರ್ಫಾನಿ, ಗೂಡಿನಬಳಿ ಮಸ್ಜಿದ್-ಎ-ಮುತ್ತಲಿಬ್ ಖತೀಬ್ ಅಶ್ರಫ್ ಫೈಝಿ ಮಲಾರ್, ಮಾಜಿ ಸಚಿವ ಬಿ ರಮಾನಾಥ ರೈ ಸಹಿತ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಆಲಡ್ಕ ಎಸ್.ಕೆ.ಎಸ್.ಎಸ್.ಎಫ್. ದಶವಾರ್ಷಿಕ ಸಂಭ್ರಮ ಪ್ರಯುಕ್ತ ಫೆಬ್ರವರಿ 6 ರಂದು ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ Rating: 5 Reviewed By: karavali Times
Scroll to Top