2024ರ ಐಸಿಸಿ ಟಿ-20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟ : ಜೂನ್ 1 ರಿಂದ 29ರವರೆಗೆ ಟೂರ್ನಿ, ಜೂನ್ 9 ರಂದು ನ್ಯೂಯಾರ್ಕ್ ಮೈದಾನದಲ್ಲಿ ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ - Karavali Times 2024ರ ಐಸಿಸಿ ಟಿ-20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟ : ಜೂನ್ 1 ರಿಂದ 29ರವರೆಗೆ ಟೂರ್ನಿ, ಜೂನ್ 9 ರಂದು ನ್ಯೂಯಾರ್ಕ್ ಮೈದಾನದಲ್ಲಿ ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ - Karavali Times

728x90

5 January 2024

2024ರ ಐಸಿಸಿ ಟಿ-20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟ : ಜೂನ್ 1 ರಿಂದ 29ರವರೆಗೆ ಟೂರ್ನಿ, ಜೂನ್ 9 ರಂದು ನ್ಯೂಯಾರ್ಕ್ ಮೈದಾನದಲ್ಲಿ ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ

ವಾಷಿಂಗ್ಟನ್, ಜನವರಿ 05, 2024 (ಕರಾವಳಿ ಟೈಮ್ಸ್) : 2024ರ ಐಸಿಸಿ ಟಿ-20 ಪುರುಷರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಜೂನ್ 1 ರಿಂದ 29ರವರೆಗೆ ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾ ದೇಶಗಳ ಜಂಟಿ ಆತಿಥ್ಯದಲ್ಲಿ ಟೂರ್ನಿ ನಡೆಯಲಿದೆ. ಈ ಬಾರಿಯೂ ಇಂಡೋ-ಪಾಕ್ ತಂಡಗಳು ಒಂದೇ ಗ್ರೂಪಿನಲ್ಲಿ ಸ್ಥಾನ ಪಡೆದಿದ್ದು, ಎ ಗುಂಪಿನಲ್ಲಿ ಸ್ಥಾನ ಬದ್ದಪ್ರತಿಸ್ಪರ್ಧಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಜೂನ್ 9 ರಂದು ನ್ಯೂಯಾರ್ಕಿನಲ್ಲಿ ಮುಖಾಮುಖಿಯಗಲಿದೆ. 

ಈ ಬಾರಿ ತಂಡಗಳ ಸಂಖ್ಯೆಯನ್ನು 16 ರಿಂದ 20ಕ್ಕೆ ಹೆಚ್ಚಿಸಲಾಗಿದೆ. ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೇ ಸೂಪರ್-12 ಹಂತವನ್ನು ಸೂಪರ್-8ಕ್ಕೆ ಇಳಿಸಲಾಗಿದೆ. ಸೂಪರ್-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. 

ಜೂನ್ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್ 19 ರಿಂದ 24ರ ವರೆಗೆ ಸೂಪರ್-8 ಪಂದ್ಯಗಳು, ಜೂನ್ 26 ಮತ್ತು ಜೂನ್ 27 ರಂದು ಸೆಮಿಫೈನಲ್ ಪಂದ್ಯಗಳು ನಡಯೆಲಿದ್ದು, ಜೂನ್ 29 ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. 

ಗುಂಪು ಹಂತದಲ್ಲಿ ಭಾರತ ಎದುರಿಸುವ 4 ಪಂದ್ಯಗಳ ಪೈಕಿ ಮೂರು ಪಂದ್ಯಗಳು ನ್ಯೂಯಾರ್ಕ್ ನಗರದಲ್ಲಿ, ಒಂದು ಪಂದ್ಯ ಫೆÇ್ಲೀರಿಡಾ ನಗರದಲ್ಲಿ ನಡೆಯಲಿದೆ. ಗುಂಪು ಹಂತದಲ್ಲಿ ಜೂನ್ 5 ರಂದು ಐರ್ಲೆಂಡ್ ವಿರುದ್ಧ, ಜೂನ್ 12 ರಂದು ಯುಎಸ್‍ಎ ವಿರುದ್ಧ, ಜೂನ್ 15 ರಂದು ಕೆನಡಾ ವಿರುದ್ಧ ಭಾರತ ತಂಡ ಆಡಲಿದೆ. ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಾಟ ಜೂನ್ 9 ರಂದು ನ್ಯೂಯಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. 

ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಯುಎಸ್‍ಎ ತಂಡಗಳಿದ್ದರೆ, ಬಿ ಗುಂಪಿನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್‍ಲೆಂಡ್, ಒಮನ್ ತಂಡಗಳು, ಸಿ ಗುಂಪಿನಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಉಗಾಂಡ, ಪಪುವಾ ನ್ಯೂ ಗಿನಿಯಾ ಹಾಗೂ ಡಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್, ನೇಪಾಳ ತಂಡಗಳು ಸ್ಥಾನ ಪಡೆದಿವೆ.

  • Blogger Comments
  • Facebook Comments

0 comments:

Post a Comment

Item Reviewed: 2024ರ ಐಸಿಸಿ ಟಿ-20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟ : ಜೂನ್ 1 ರಿಂದ 29ರವರೆಗೆ ಟೂರ್ನಿ, ಜೂನ್ 9 ರಂದು ನ್ಯೂಯಾರ್ಕ್ ಮೈದಾನದಲ್ಲಿ ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ Rating: 5 Reviewed By: karavali Times
Scroll to Top