ಬಂಟ್ವಾಳ, ಡಿಸೆಂಬರ್ 24, 2023 (ಕರಾವಳಿ ಟೈಮ್ಸ್) : ಅಕ್ರಮ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೂಂಜಾಲಕಟ್ಟೆ ಠಾಣಾ ಪಿಎಸ್ಸೈ ನಂದಕುಮಾರ್ ನೇತೃತ್ವದ ಪೊಲೀಸರು ದಾಳಿ ನಡೆಸಿ 7 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿ ಸಾವಿರಾರು ರೂಪಾಯಿ ನಗದು ಹಣ, ಕೃತ್ಯಕ್ಕೆ ಬಳಸಿದ ಸೊತ್ತುಗಳು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ವಾಹನಗಳನ್ನು ವಶಪಡಿಸಿಕೊಂಡ ಘಟನೆ ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ದಡ್ಡರದೊಟ್ಟು ಎಂಬಲ್ಲಿ ಶುಕ್ರವಾರ ಸಂಜೆ (ಡಿ 22) ನಡೆದಿದೆ.
ಬಂಧಿತ ಆರೋಪಿಗಳನ್ನು ಅಜ್ಜಿಬೆಟ್ಟು ನಿವಾಸಿ ಯೋಗೀಶ್, ಚೆನ್ನೈತ್ತೋಡಿ ನಿವಾಸಿಗಳಾದ ಮಹಮ್ಮದ್ ಶಾಫಿ, ಗೋಪಾಲ, ಪುತ್ತೂರು ತಾಲೂಕು ಕೊಡಂಬಾರಿ ನಿವಾಸಿ ನಾಗೇಶ್ ಶೆಟ್ಟಿ, ಅಮ್ಮಾಡಿ ನಿವಾಸಿ ಕೃಷ್ಣಪ್ಪ, ಅಜ್ಜಿಬೆಟ್ಟು ನಿವಾಸಿ ಸಂದೇಶ್ ಶೆಟ್ಟಿ, ಸಂಗಬೆಟ್ಟು ನಿವಾಸಿ ಉಮರಬ್ಬ ಎಂದು ಗುರುತಿಸಲಾಗಿದೆ.
ಬಂಟ್ವಾಳ ತಾಲೂಕು ಆಜ್ಜಿಬೆಟ್ಟು ಗ್ರಾಮದ ದಡ್ಡರದೊಟ್ಟು ನಿವಾಸಿ ದಿವಂಗತ ರಘು ಶೆಟ್ಟಿ ಅವರಿಗೆ ಸೇರಿದ ಹಂಚು ಛಾವಣಿಯ ಕಟ್ಟಡದೊಳಗೆ ಅಕ್ರಮವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ.
ದಾಳಿ ವೇಳೆ ಆರೋಪಿತರಿಂದ ಜುಗಾರಿ ಆಟಕ್ಕೆ ಬಳಸಿದ ವಿವಿಧ ಮುಖ ಬೆಲೆಯ ಒಟ್ಟು 51,100/- ರೂಪಾಯಿ ನಗದು ಹಣ, ಕೃತ್ಯಕ್ಕೆ ಬಳಸಿದ 1,450 ರೂಪಾಯಿ ಬೆಲೆಯ ಸೊತ್ತುಗಳು ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ವಿವಿಧ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಪಕ್ರರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
0 comments:
Post a Comment