ಬೆಳ್ತಂಗಡಿ, ಡಿಸೆಂಬರ್ 13, 2023 (ಕರಾವಳಿ ಟೈಮ್ಸ್) : ಬಸ್ಸು ಹತ್ತುವಷ್ಟರಲ್ಲಿ ಮಹಿಳೆಯ ಕೊರಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಮಾಲೆಯನ್ನು ದೋಚಿದ ಘಟನೆ ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಮಂಗಳವಾರ ಸಂಜೆ ನಡೆದಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜಿರೆ ನಿವಾಸಿ ವಾರಿಜ ಟಿ (53) ಅವರು ಮಂಗಳವಾರ ಸಂಜೆ ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಧರ್ಮಸ್ಥಳಕ್ಕೆ ಹೋಗುವ ಕೆ ಎಸ್ ಆರ್ ಟಿ ಸಿ ಬಸ್ಸು ಹತ್ತುವಷ್ಟರಲ್ಲಿ ಯಾರೋ ದೂಡಿ, ಅವರ ಕೊರಳಿನಲ್ಲಿ ಧರಿಸಿದ್ದ ಚಿನ್ನದ ಮಾಲೆಯನ್ನು ಎಳೆದು ತೆಗೆದಿರುತ್ತಾರೆ. ಆ ಸಂದರ್ಭ ವಾರಿಜ ಅವರು ಬೊಬ್ಬೆ ಹೊಡೆದಿದ್ದಾರಾದರೂ ಮಾಲೆ ಕಳವು ಆರೋಪಿಯ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಕಳವಾಗಿರುವ ಚಿನ್ನದ ಮಾಲೆಯು ಸುಮಾರು 1.44 ಲಕ್ಷ ರೂಪಾಯಿ ಮೌಲ್ಯದ 36 ಗ್ರಾಂ ತೂಕದ್ದಾಗಿದೆ. ಈ ಬಗ್ಗೆ ವಾರಿಜ ಅವರು ಬೆಳ್ತಂಗಡಿ ಪೆÇಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment