ಕಡಬ, ಡಿಸೆಂಬರ್ 23, 2023 (ಕರಾವಳಿ ಟೈಮ್ಸ್) : ಕಡಬ ಪೆÇಲೀಸ್ ಠಾಣೆಯ ಅಪರಾಧ ಕ್ರಮಾಂಕ 160/2015 ಕಲಂ 143, 144, 147, 148, 353, 332, 307, ಆರ್/ಡಬ್ಲ್ಯು 149 ಐಪಿಸಿ ಹಾಗೂ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ಕೋರ್ಟ್ ಪುತ್ತೂರು ಇಲ್ಲಿನ ಎಸ್ ಸಿ ಸಂಖ್ಯೆ ನಂಬ್ರ 5008/2018 ರ ಪ್ರಕರಣದಲ್ಲಿ ಕಳೆದ 1 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ, ಆರೋಪಿ ಸಾಣೂರು ಗ್ರಾಮದ ಮಾಂತೂರು ಮನೆ ನಿವಾಸಿ ಅರ್ಷದ್ ಅಲಿಯಾಸ್ ಹರ್ಷ ಎಂಬಾತನನ್ನು ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ ಎಸ್ ಹಾಗೂ ಕಡಬ ಪಿಎಸ್ಸೈ ಅಭಿನಂದನ್ ಅವರ ಮಾರ್ಗದರ್ಶನದಲ್ಲಿ ಎಚ್ ಸಿ ರಾಜು ನಾಯ್ಕ ಹಾಗೂ ಪಿಸಿ ಸಿರಾಜುದ್ದಿನ್ ಅವರು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
0 comments:
Post a Comment