ವೇಣೂರು, ಡಿಸೆಂಬರ್ 22, 2023 (ಕರಾವಳಿ ಟೈಮ್ಸ್) : ಆರೇಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವೇಣೂರು ಪೊಲೀಸ್ ಠಾಣಾ ವಾರಂಟ್ ಆರೋಪಿ ಸುಳ್ಯ ತಾಲೂಕು, ಐವತ್ತೊಕ್ಲು ಗ್ರಾಮದ ನಿವಾಸಿ ಶರೀಫ್ ಅಲಿಯಾಸ್ ಮಹಮ್ಮದ್ ಶರೀಫ್ (43) ಎಂಬಾತನನ್ನು ವೇಣೂರು ಪೊಲೀಸರು ವಿಟ್ಲದ ಸಾರಡ್ಕ ಎಂಬಲ್ಲಿ ಗುರುವಾರ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವೇಣೂರು ಠಾಣಾ ಸಿಬ್ಬಂದಿಗಳಾದ ಪ್ರವೀಣ್ ಎಂ ಹಾಗೂ ಸಚಿನ್ ಅವರು ಆರೋಪಿ ಬಂಧನದ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
0 comments:
Post a Comment