ಧರ್ಮಸ್ಥಳ, ಡಿಸೆಂಬರ್ 09, 2023 (ಕರಾವಳಿ ಟೈಮ್ಸ್) : ಧರ್ಮಸ್ಥಳ ಪೊಲೀಸ್ ಠಾಣಾ ಖೋಟಾ ನೋಟು ಪ್ರಕರಣದಲ್ಲಿ ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೇ ಆಸ್ತಿ ಜಪ್ತಿ ವಾರಂಟ್ ಹೊರಡಿಸಲಾಗಿದ್ದರೂ ಪೊಲೀಸರ ಕೈಗೆ ಸಿಗದೇ ಕಳೆದ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ತುಮಕೂರು ಜಿಲ್ಲೆ, ಚಿಕ್ಕನಾಯಕನ ಹಳ್ಳಿ ಬೀದಿ ಮನೆ-ದೇವಾಂಗ ನಿವಾಸಿ ಮೋಹನ ಕುಮಾರ್ ಎಂಬಾತನನ್ನು ಬೆಂಗಳೂರಿನ ಗೊಲ್ಲಹಳ್ಳಿ ಬಸ್ಸು ತಂಗುದಾಣದ ಬಳಿ ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಅದೇ ರೀತಿ ಕಳೆದ 4 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಆರೋಪಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ, ಜೋಗಿಹಳ್ಳಿ ಗೇಟ್ ಮನೆ ನಿವಾಸಿ ಕೆಂಪರಾಜ್ ಎಂಬಾತನನ್ನು ಚಿಕ್ಕನಾಯಕನಹಳ್ಳಿ ಮುಳಬಾಗಿಲು ಬಸ್ಸು ನಿಲ್ದಾಣದ ಬಳಿ ಗುರುವಾರ ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಸಫಲರಾಗಿದ್ದಾರೆ.
ಧರ್ಮಸ್ಥಳ ಠಾಣಾ ಅಪರಾಧ ವಿಭಾಗದ ಪಿಎಸ್ಸೆöÊ ಸಮರ್ಥ ಆರ್ ಗಾಣಿಗೇರ್, ಸಿಬ್ಬಂದಿಗಳಾದ ರಾಜೇಶ್ ಎನ್ ಹಾಗೂ ವಿನಯ ಕುಮಾರ್ ಅವರ ತಂಡ ಈ ಬಂಧನ ಕಾರ್ಯಾಚರಣೆ ನಡೆಸಿದೆ.
0 comments:
Post a Comment