ಬಂಟ್ವಾಳ, ಡಿಸೆಂಬರ್ 21, 2023 (ಕರಾವಳಿ ಟೈಮ್ಸ್) : ಕೇರಳ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಮಹಿಳೆಯೋರ್ವರು ಬಸ್ಸಿನಿಂದ ಹೊರಗೆ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಬದನಾಜೆ ಎಂಬಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಗಾಯಾಳು ಮಹಿಳೆಯನ್ನು ಕುಳ ಗ್ರಾಮದ ನಿವಾಸಿ ಫಾತಿಮಾ ಎಂದು ಗುರುತಿಸಲಾಗಿದೆ. ಈ ಬಗ್ಗೆ ಫಾತಿಮಾ ಅವರ ಪುತ್ರಿ ರುಕಿಯಾ ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಗುರುವಾರ ಬೆಳಿಗ್ಗೆ ತಾಯಿಯೊಂದಿಗೆ ಕೆ ಎಲ್15 ಎ0001 ನೋಂದಣಿ ಸಂಖ್ಯೆಯ ಕೇರಳದ ಕೆ ಎಸ್ ಅರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಾ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬದನಾಜೆ ಎಂಬಲ್ಲಿ ತಲುಪಿದಾಗ, ಬಸ್ ಚಾಲಕ ತಿರುವು ರಸ್ತೆಯಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ತನ್ನ ತಾಯಿ ಪಾತಿಮಾ ಅವರು ಬಸ್ಸಿನ ಮುಂಭಾಗದ ಬಾಗಿಲಿನ ಮೂಲಕ ಹೊರಗೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment