ಉಪ್ಪಿನಂಗಡಿ, ಡಿಸೆಂಬರ್ 23, 2023 (ಕರಾವಳಿ ಟೈಮ್ಸ್) : ಲಾರಿ ಹಾಗೂ ಅಟೋ ರಿಕ್ಷಾ ನಡುವೆ ನಡೆದ ಅಪಘಾತದಿಂದಾಗಿ ಮೂವರು ರಿಕ್ಷಾ ಚಾಲಕರು ಗಾಯಗೊಂಡ ಘಟನೆ ಉಪ್ಪಿನಂಗಡಿ ಕುಮಾರಧಾರಾ ಸೇತುವೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಪೆರ್ನೆ ನಿವಾಸಿ ಫ್ರಾಂಕ್ಲಿನ್ ಗ್ಲೆನ್ ಲೋಬೋ ಚಾಲಕರಾಗಿ ಪೂರನ್ ಸಿಂಗ್ ಹಾಗೂ ಅಜಯ್ ಕರ್ವಾಲ ಎಂಬವರು ಪ್ರಯಾಣಿಕರಾಗಿ ಸಂಚರಿಸುತ್ತಿದ್ದ ಅಟೋ ರಿಕ್ಷಾಗೆ ನಿತೇಶ್ ಎಂಬವರು ಚಲಾಯಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ರಸ್ತೆಗೆ ಮಗುಚಿ ಬಿದ್ದ ಅಟೋ ರಿಕ್ಷಾದಲ್ಲಿದ್ದ ಮೂವರಿಗೂ ಗಾಯಗಳಾಗಿರುತ್ತವೆ. ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಿಂದ ಎರಡೂ ವಾಹನಗಳೂ ಜಖಂಗೊಂಡಿದೆ. ಲಾರಿ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಘಟನೆಗೆ ಕಾರಣ ಎಂದು ರಿಕ್ಷಾ ಚಾಲಕ ಫ್ರಾಂಕ್ಲಿನ್ ಗ್ಲೇನ್ ಲೋಬೋ ಅವರು ನೀಡಿದ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment