ಉಪ್ಪಿನಂಗಡಿ, ಡಿಸೆಂಬರ್ 19, 2023 (ಕರಾವಳಿ ಟೈಮ್ಸ್) : ಅಟೋ ರಿಕ್ಷಾಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮಗು ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.
ಅಪಘಾತದಿಂದ ಅಟೋ ರಿಕ್ಷಾ ಚಾಲಕ ಹಿರೇಬಂಡಾರಿ ನಿವಾಸಿ ಸುಧಾಕರ್ (54) ಮಗು ಸಹಿತ ಪ್ರಯಾಣಿಕರಾದ ಸೂರತ್ ಹಾಗೂ ಆಯಿಷಾ ಎಂಬವರು ಗಾಯಗೊಂಡಿದ್ದು, ಚಾಲಕಗೆ ಸಣ್ಣಪುಟ್ಟ ಗಾಯಗಳಾದರೆ, ಮಗು ಹಾಗೂ ಸೂರತ್ ಉಪ್ಪಿನಂಗಡಿ ಸರಕರಿ ಆಸ್ಪತ್ರೆಗೆ ದಾಖಲಾಗಿದ್ದು, ಆಯಿಷಾ ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ರಮೇಶ್ ಆರ್ ಎಂಬವರು ಚಲಾಯಿಸುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಅಟೋ ರಿಕ್ಷಾ ರಸ್ತೆಗೆ ಪಲ್ಟಿಯಾಗಿ ಬಿದ್ದಿದ್ದು ರಿಕ್ಷಾ ತೀವ್ರ ಜಖಂಗೊಂಡಿದೆ. ಟ್ಯಾಂಕರ್ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment