ಉಪ್ಪಳ : ಜನವರಿ 19-20 ರಂದು ದಾರುನ್ನಜಾತ್ ಸಂಸ್ಥೆಯ 14ನೇ ವಾರ್ಷಿಕ, ಸನದುದಾನ ಸಮ್ಮೇಳ ಹಾಗೂ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು - Karavali Times ಉಪ್ಪಳ : ಜನವರಿ 19-20 ರಂದು ದಾರುನ್ನಜಾತ್ ಸಂಸ್ಥೆಯ 14ನೇ ವಾರ್ಷಿಕ, ಸನದುದಾನ ಸಮ್ಮೇಳ ಹಾಗೂ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು - Karavali Times

728x90

27 December 2023

ಉಪ್ಪಳ : ಜನವರಿ 19-20 ರಂದು ದಾರುನ್ನಜಾತ್ ಸಂಸ್ಥೆಯ 14ನೇ ವಾರ್ಷಿಕ, ಸನದುದಾನ ಸಮ್ಮೇಳ ಹಾಗೂ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು

ಕಾಸರಗೋಡು, ಡಿಸೆಂಬರ್ 27, 2023 (ಕರಾವಳಿ ಟೈಮ್ಸ್) : ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಮೀಯಪದವು ಚಿಗುರುಪಾದೆ-ಚಿನಾಳ ಸಿ.ಎಂ. ನಗರದಲ್ಲಿ “ವಿನಯಂ, ವಿಜ್ಞಾನಂ, ಸೇವನಂ” ಎಂಬ ಧ್ಯೇಯ ವಾಕ್ಯದಡಿ ಕಾರ್ಯಾಚರಿಸುತ್ತಿರುವ ದಾರುನ್ನಜಾತ್ ಸಂಸ್ಥೆಯ 14ನೇ ವಾರ್ಷಿಕ ಸನದುದಾನ ಸಮ್ಮೇಳನವು 2024 ರ ಜನವರಿ 19 ಹಾಗೂ 20 ರ ಶುಕ್ರವಾರ ಮತ್ತು ಶನಿವಾರ ನಡೆಯಲಿದೆ. 

ಜನವರಿ 19 ರಂದು ಅಪರಾಹ್ನ 1.30ಕ್ಕೆ ಸಮ್ಮೇಳನದ ಧ್ವಜಾರೋಹಣ ನಡೆಯಲಿದ್ದು, 2 ಗಂಟೆಗೆ ಸಯ್ಯಿದ್ ಸಂಶುದ್ದೀನ್ ತಂಙಳ್ ಗಾಂಧಿನಗರ ಅವರ ನೇತೃತ್ವದಲ್ಲಿ ಏರ್ವಾಡಿ ಮೌಲಿದ್ ನಡೆಯಲಿದೆ. ಸಂಜೆ 4 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಸಯ್ಯಿದ್ ಶಹೀರ್ ತಂಙಳ್ ಮಳ್‍ಹರ್ ಅವರು ಉದ್ಘಾಟಿಸುವರು. ಸಂಜೆ 6.30ಕ್ಕೆ ಸಯ್ಯಿದ್ ಕೆ ಎಸ್ ಮುಖ್ತಾರ್ ತಂಙಳ್ ಕುಂಬೋಳ್ ಅವರ ನೇತೃತ್ವದಲ್ಲಿ ಜಲಾಲಿಯ್ಯಾ ರಾತೀಬ್ ನಡೆಯಲಿದೆ. ರಾತ್ರಿ 8 ಗಂಟೆಗೆ ಸಯ್ಯಿದ್ ಅತಾವುಲ್ಲಾ ತಂಙಳ್ ಉದ್ಯಾವರ ಅವರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಹಮೀದ್ ಫೈಝಿ ಕಿಲ್ಲೂರು ಅವರು ಮುಖ್ಯ ಭಾಷಣಗೈಯುವರು. ಬಳಿಕ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಅವರ ನೇತೃತ್ವದಲ್ಲಿ ಕೂಟು ಪ್ರಾರ್ಥನೆ ನಡೆಯಲಿದೆ. ರಾತ್ರಿ 10 ಗಂಟೆಗೆ ರಝ್ವಿ ಇಖ್ವಾನ್ ಬುರ್‍ದಾ ಸಂಘದ ನೇತೃತ್ವದಲ್ಲಿ ಬುರ್‍ದಾ ಮಜ್ಲಿಸ್ ನಡೆಯಲಿದೆ. 

ಜನವರಿ 20 ರಂದು ಬೆಳಿಗ್ಗೆ 6 ಗಂಟೆಗೆ ಅಬ್ದುಲ್ ಖಾದರ್ ಸಖಾಫಿ ಚಿನಾಲ ಅವರ ನೇತೃತ್ವದಲ್ಲಿ ಮಡವೂರ್ ಮೌಲಿದ್ ನಡೆಯಲಿದ್ದು, ಶಬೀರ್ ಅಶ್-ಅರಿ ಕೆ.ಸಿ.ರೋಡು ಅವರು ಉಪನ್ಯಾಸಗೈಯುವರು. ಬೆಳಿಗ್ಗೆ 8 ಗಂಟೆಗೆ ನಡೆಯುವ ಸಂಸ್ಥೆಯಿಂದ ಬಿರುದು ಪಡೆದ ರಝ್ವಿ ಬಿರುದಾಂಕಿತರ ಸಂಗಮವನ್ನು ಅಬ್ದುಲ್ ಲತೀಫ್ ಮದನಿ ಸಜಿಪ ಅವರು ಉದ್ಘಾಟಿಸುವರು. ಅಬ್ದುಲ್ಲ ಸಖಾಫಿ ಪಲ್ಲಪ್ಪಾಡಿ ದುವಾ ನೆರವೇರಿಸುವರು. ಸಯ್ಯಿದ್ ಸಿಟಿಎಂ ಕುಂಞÂಕೋಯ ತಂಙಳ್ ರಝ್ವಿ ಮುಡಿಪು ಅಧ್ಯಕ್ಷತೆ ವಹಿಸುವರು. 

ಬೆಳಿಗ್ಗೆ 10 ಗಂಟೆಗೆ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ನೇತೃತ್ವದಲ್ಲಿ ಅಜ್ಮೀರ್ ಮೌಲಿದ್ ನಡೆಯಲಿದ್ದು, ರಫೀಕ್ ಸಅದಿ ದೇಲಂಪಾಡಿ ಮುಖ್ಯ ಭಾಷಣಗೈಯುವರು. ಪ್ರಮುಖರಾದ ಸಯ್ಯಿದ್ ಯಹ್ಯಲ್ ಬುಖಾರಿ ತಂಙಳ್ ಮಡವೂರು-ಕೋಟೆ, ಸಯ್ಯಿದ್ ಶರಫುದ್ದೀನ್ ತಂಙಳ್ ಗಾಂಧಿನಗರ, ಸಯ್ಯಿದ್ ನುಅïಮಾನ್ ತಂಙಳ್ ಪಯ್ಯಕ್ಕಿ ಭಾಗವಹಿಸಲಿದ್ದಾರೆ. 

ಜನವರಿ 20 ರಂದು ಸಂಜೆ 4 ಗಂಟೆಗೆ ಸನುದುದಾನ ಸಮ್ಮೇಳನ ನಡೆಯಲಿದ್ದು, ಡಾ ಮುಹಮ್ಮದ್ ಫಾರೂಕ್ ನಈಮಿ ಅಲ್-ಬುಖಾರಿ ಕೊಲ್ಲಂ ಅವರು ಸಮ್ಮೇಳನವನ್ನುದ್ದೇಶಿಸಿ ಮುಖ್ಯ ಭಾಷಣಗೈಯುವರು. ಮುಖ್ಯ ಅತಿಥಿಗಳಾಗಿ ಸಯ್ಯಿದ್ ಮುಹಮ್ಮದ್ ಮನ್ನಾನ್ ರಝಾ ಮನ್ನಾನಿ ಮಿಯಾನ್ ನೂರಿ ಬರೇಲಿ ಶರೀಫ್, ಮರ್ಕಝ್ ಕ್ನಾಲಜ್ ಸಿಟಿ ಡೈರೆಕ್ಟರ್ ಡಾ ಅಬ್ದುಲ್ ಹಕೀಂ ಅಝ್-ಹರಿ, ಸಯ್ಯಿದ್ ಜಲಾಲುದ್ದೀನ್ ತಂಙಳ್ ಮಳ್ ಹರ್, ಸಯ್ಯಿದ್ ಸಲೀಂ ಕುಶಾಲಿ ಮೈಸೂರು, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ತಲಕ್ಕಿ, ಸಯ್ಯಿದ್ ಜಲಾಲುದ್ದೀನ್ ಜಮಾಲುಲ್ಲೈಲಿ ತಂಙಳ್ ಮಲಪ್ಪುರಂ, ಸಯ್ಯಿದ್ ಆಟಕೋಯ ತಂಙಳ್ ಮಾಣಿಮೂಲೆ, ಪಲ್ಲಂಗೋಡ್ ಅಬ್ದುಲ್ ಖಾದರ್ ಮದನಿ, ಎ ಬಿ ಮೊಯಿದು ಸಅದಿ ಚೇರೂರು, ಮುಶ್ತಾಕ್ ರಝ್ವಿ ಉಪ್ಪಳ, ಅಬ್ರಾರ್ ರಝ್ವಿ ಕಾರ್ಕಳ, ಮಂಜೇಶ್ವರ ಶಾಸಕ ಎಕೆಂ ಅಶ್ರಫ್ ಮೊದಲಾದವರು ಭಾಗವಹಿಸುವರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಉಪ್ಪಳ : ಜನವರಿ 19-20 ರಂದು ದಾರುನ್ನಜಾತ್ ಸಂಸ್ಥೆಯ 14ನೇ ವಾರ್ಷಿಕ, ಸನದುದಾನ ಸಮ್ಮೇಳ ಹಾಗೂ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು Rating: 5 Reviewed By: karavali Times
Scroll to Top