ಬಂಟ್ವಾಳ, ಡಿಸೆಂಬರ್ 13, 2023 (ಕರಾವಳಿ ಟೈಮ್ಸ್) : ತಾಲೂಕಿನ ಅಳಿಕೆ ಗ್ರಾಮದ ಅದಾಳ ಎಂಬಲ್ಲಿನ ಕಲ್ಲಿನ ಕೋರೆಯ ಗುಂಡಿಗೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮೃತ ಕಾರ್ಮಿಕನನ್ನು ವಿಟ್ಲಮುಡ್ನೂರು ಗ್ರಾಮದ ನಿವಾಸಿ ಕಾರ್ತಿಕ್ (23) ಎಂದು ಹೆಸರಿಸಲಾಗಿದೆ. ಕಾರ್ತಿಕ್ ಅವರು ಮಂಗಳವಾರ ಅಳಿಕೆ ಗ್ರಾಮದ ದೇವದಾಸ ಅವರಿಗೆ ಸೇರಿದ ಕಲ್ಲಿನ ಕೋರೆಯ ಮಣ್ಣು ತೆಗೆಯುವ ಕೆಲಸಕ್ಕೆ ನೆರೆಯ ಸತೀಶ್ ಎಂಬವರೊಂದಿಗೆ ಸೇರಿಕೊಂಡು ಹೋಗಿದ್ದರು. ಮಧ್ಯಾಹ್ನ ತನಕ ಕೆಲಸ ಮಾಡಿ ಕೈಕಾಲು ಮುಖ ತೊಳೆಯಲೆಂದು ಕೋರೆಯ ನೀರಿನ ಗುಂಡಿಯ ಬಳಿಗೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಈ ಘಟನೆ ಸಂಭವಿಸಿದೆ.
ಅವರನ್ನು ತಕ್ಷಣ ಮೇಲಕ್ಕೆತ್ತಿದ ಸಹ ಕಾರ್ಮಿಕ ಸತೀಶ ಅವರು ವಿಟ್ಲ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೃತ ಕಾರ್ತಿಕ್ ಅವರ ಸಹೋದರ ಲೋಕೇಶ್ ಅವರು ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment