ಬಂಟ್ವಾಳ, ಡಿಸೆಂಬರ್ 25, 2023 (ಕರಾವಳಿ ಟೈಮ್ಸ್) : ಹಣ ದ್ವಿಗುಣಗೊಳಿಸುವ ಆಪ್ ಗೆ ಮಾರುಹೋಗಿ ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡಿ ಕೊನೆಗೆ ಮೋಸ ಹೋಗಿದ್ದೇನೆ ಎಂಬುದರ ಅರಿವಾದಾಗ ಮನನೊಂದು ಮಹಿಳೆಯೋರ್ವರು ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಸಮೀಪದ ಪುಚ್ಚಮೊಗರು ಎಂಬಲ್ಲಿ ಭಾನುವಾರ ಬೆಳಕಿಗೆ ಬಂದಿದೆ. ಕುಕ್ಕಿಪಾಡಿ ಗ್ರಾಮದ ವೀಟಾ ಡಿಸೋಜ (32) ಎಬವರೇ ಆತ್ಮಹತ್ಯೆಗೆ ಶರಣಾದ ಮಹಿಳೆ.
ಡಿ 8 ರಿಂದ 22 ರ ನಡುವಿನ ಅವಧಿಯಲ್ಲಿ ಈಕೆಯ ವಾಟ್ಸಪ್ ಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಹಣ ದ್ವಿಗುಣ ಮಾಡಿಕೊಡುವುದಾಗಿ ಹಾಗೂ ಅದಕ್ಕಾಗಿ ಟೆಲಿಗ್ರಾಂ ಆಪ್ ಡೌನ್ ಲೋಡ್ ಮಾಡುವಂತೆ ತಿಳಿಸಿ ಲಿಂಕ್ ಇರುವ ಮೆಸೇಜ್ ಕಳಿಸಿದ್ದು, ಈ ಮೆಸೇಜ್ ಪ್ರಕಾರ ವೀಟಾ ಅವರು ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹರಿಸಿ ಹಲವು ಹಂತಗಳಲ್ಲಿ ಒಟ್ಟು 20 ಲಕ್ಷದ 29 ಸಾವಿರದ ನೂರು ರೂಪಾಯಿಗಳನ್ನು ಬೇರೆ ಬೇರೆ ಖಾತೆಗಳಿಗೆ ಹಣವನ್ನು ಪಾವತಿ ಮಾಡಿದ್ದರು. ಹಣ ದ್ವಿಗುಣವೂ ಇಲ್ಲ, ಕೊಟ್ಟ ಹಣ ವಾಪಸ್ಸೂ ಇಲ್ಲದೆ ಭಾರೀ ಪ್ರಮಾಣದ ಹಣ ಕಳೆದುಕೊಂಡ ಬಳಿಕ ಇದೊಂದು ಮೋಸದ ಮಾಯಾಜಾಲ ಎಂದು ಮನವರಿಕೆಯಾಗಿದ್ದು ಈ ಬಗ್ಗೆ ಪೂಂಜಾಲಕಟ್ಟೆ ಪೆÇಲೀಸರಿಗೂ ಸ್ವತಃ ವೀಟಾ ಅವರೇ ಶನಿವಾರ (ಡಿ 23) ದೂರು ನೀಡಿದ್ದರು. ಮಹಿಳೆಯ ದೂರಿನ ಬಗ್ಗೆ ಪೂಂಜಾಲಕಟ್ಟೆ ಪೆÇಲೀಸರು ತನಿಖೆ ಕೈಗೊಳ್ಳುವ ಹಂತದಲ್ಲೇ ಮಹಿಳೆ ಮಾನಸಿಕವಾಗಿ ಖಿನ್ನತೆಗೊಳಗಾಗಿ ನದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಹಿಂದೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ£ರ್ವಹಿಸುತ್ತಿದ್ದ ವೀಟಾ ಅವರು ಇತ್ತೀಚೆಗೆ ಶಿಕ್ಷಕಿ ಹುದ್ದೆ ತೊರೆದು ವಿಮಾ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು.
ಶನಿವಾರ ರಾತ್ರಿ ಮೊಬೈಲನ್ನು ಮನೆಯಲ್ಲಿಟ್ಟು ವೀಟಾ ಅವರು ದ್ವಿಚಕ್ರ ವಾಹನದಲ್ಲಿ ವಾಮದಪದವಿಗೆಂದು ತೆರಳಿದ್ದು, ಬಳಿಕ ಮನೆಗೆ ವಾಪಾಸಾಗದೆ ನಿಗೂಢವಾಗಿ ಕಾಣೆಯಾಗಿದ್ದರು. ಹುಡುಕಾಟ ನಡೆಸಿದಾಗ ಮರುದಿನ ಅಂದರೆ ಭಾನುವಾರ (ಡಿ 24) ಪುಚ್ಚಮೊಗರು ಫಲ್ಗುಣಿ ನದಿ ಸೇತುವೆಯ ಮೇಲೆ ಇವರ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅಣೆಕಟ್ಟು ಬಳಿ ಈಕೆಯ ಮೃತದೇಹ ಪತ್ತೆಯಾಗಿದೆÉ. ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಕಾರದಿಂದ ಭಾನುವಾರ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತಳ ಅಕ್ಕ, ಮಂಗಳೂರು-ಜೋಕಟ್ಟೆ ನಿವಾಸಿ ವೀಣಾ ಡಿ ಸೋಜ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 44/2023 ಕಲಂ 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಿಸಿಕೊಂಡಿರುವ ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment