ಮಂಗಳೂರು, ಡಿಸೆಂಬರ್ 11, 2023 (ಕರಾವಳಿ ಟೈಮ್ಸ್) : ತಲಪಾಡಿ-ಕೆ.ಸಿ.ರೋಡು ನಿವಾಸಿ ಕೆ ಮುಹಮ್ಮದ್ ಅವರ ಪುತ್ರ ಜಾಫರ್ ಶರೀಫ್ ಹಾಗೂ ಪಾವೂರು-ಮಲಾರ್ ಬದ್ರಿಯಾ ನಗರ ನಿವಾಸಿ ಅಬ್ದುಲ್ ಸಮದ್ ಅವರ ಪುತ್ರಿ ಜಸೀರಾ ಯಾಸ್ಮಿನ್ ಅವರ ವಿವಾಹವು ಡಿಸೆಂಬರ್ 10 ರಂದು ಭಾನುವಾರ ಕೋಟೆಕಾರು ನೂರ್ ಮಹಲ್ ಹಾಲ್ ನಲ್ಲಿ ನೆರವೇರಿತು.
ಹಾಜಿ ಕೆ ಪಿ ಹುಸೈನ್ ಸಅದಿ ಕೆ ಸಿ ರೋಡು ಅವರು ನಿಕಾಹ್ ನೇತೃತ್ವ ವಹಿಸಿದ್ದರು. ಕೆ.ಸಿ.ರೋಡು ಮುಬಾರಕ್ ಜುಮಾ ಮಸೀದಿ ಮುದರ್ರಿಸ್ ಮುನೀರ್ ಸಖಾಫಿ, ಪ್ರಮುಖರಾದ ಮುಹಮ್ಮದ್ ಮದನಿ, ನಾಸಿರ್ ಸಖಾಫಿ ಕೆ.ಸಿ.ರೋಡು, ಉಸ್ಮಾನ್ ಸಖಾಫಿ ಕೆ.ಸಿ.ರೋಡು, ರಹೀಂ ಝುಹ್ರಿ ಕೆ.ಸಿ.ರೋಡು, ಅಬ್ದುಸ್ಸಮದ್ ಸಖಾಫಿ, ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಕಾಂಗ್ರೆಸ್ ಮುಖಂಡ ಅಬ್ದುಲ್ ಸಲಾಂ ಕೆ.ಸಿ.ರೋಡು, ಎಸ್ಸೆಸ್ಸೆಫ್ ಕೆ.ಸಿ.ರೋಡು ಶಾಖಾಧ್ಯಕ್ಷ ಅನ್ವೀಝ್ ಕೆ.ಸಿ.ರೋಡು, ಅಲ್ತಾಫ್ ಪಳ್ಳ ಮೊದಲಾದವರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದು, ನೂತನ ವಧೂ-ವರರಿಗೆ ಶುಭಾಶಯ ಕೋರಿದರು.
0 comments:
Post a Comment