ಬಂಟ್ವಾಳ, ಡಿಸೆಂಬರ್ 16, 2023 (ಕರಾವಳಿ ಟೈಮ್ಸ್) : ವಿವಾಹಿತ ಮಹಿಳೆಯ ಜೊತೆ ಸಲುಗೆ ಹೊಂದಿ ಬಳಿಕ ದೈಹಿಕ ಸಂಪರ್ಕ ಸಾಧಿಸಿ ಮದುವೆಯ ಭರವಸೆ ನೀಡಿ ಇದೀಗ ಮದುವೆಯಾಗಲು ನಿರಾಕರಿಸಿದ್ದಲ್ಲದೆ ಮಹಿಳೆಗೆ ಹಲ್ಲೆ ನಡೆಸಿ, ಮಕ್ಕಳ ಸಹಿತ ಕೊಲ್ಲುವುದಾಗಿ ಜೀವಬೆದರಿಕೆ ಒಡ್ಡಿದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಾಗಿದೆ.
ಮಹಿಳೆಗೆ ವಂಚಿಸಿದ ಆರೋಪಿಯನ್ನು ನರಿಕೊಂಬು ಗ್ರಾಮದ ನಿವಾಸಿ ತಸ್ಲೀಂ ಆರೀಫ್ ಎಂದು ಹೆಸರಿಸಲಾಗಿದೆ. ಈತ ತನ್ನ ಬಂಟ್ವಾಳ ಸಮೀಪದ ಸ್ನೇಹಿತನ ಮನೆಗೆ ಬರುತ್ತಿದ್ದು, ಬಳಿಕ ಸ್ನೇಹಿತನ ಪತ್ನಿಗೇ ಗಾಳ ಹಾಕಿ ಆಕೆಯೊಂದಿಗೆ ಸಲುಗೆ ಹೊಂದಿ ಬಳಿಕ ಅದು ದೈಹಿಕ ಸಂಪರ್ಕದ ಹಂತಕ್ಕೂ ಬಂದಿದೆ ಎನ್ನಲಾಗಿದೆ.
ಈತನ ವಕ್ರ ದೃಷ್ಟಿಯಿಂದಾಗಿ ಮಹಿಳೆಯ ಪತಿ ಪತ್ನಿಯಿಂದ ದೂರವಾಗಿದ್ದ ಎನ್ನಲಾಗಿದ್ದು, ಇದರಿಂದ ಆರೋಪಿ ತಸ್ಲೀಮನೇ ಬಳಿಕ ಮಹಿಳೆಗೆ ಬಾಡಿಗೆ ಮನೆ ಮಾಡಿಕೊಟ್ಟು ಇರಿಸಿಕೊಂಡಿದ್ದ ಎನ್ನಲಾಗಿದೆ. ನಂತರ ಆಕೆಯನ್ನು ಮದುವೆಯಾಗುವ ಭರವಸೆ ನೀಡಿ ನಿರಂತರ ದೈಹಿಕ ಸಂಪರ್ಕ ಮಾಡಿ ಇದೀಗ ಮದುವೆಗೂ ನಿರಾಕರಿಸುವುದರ ಜೊತೆಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಸಂತ್ರಸ್ತೆ ಬಂಟ್ವಾಳ ನಗರ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಇವರಿಬ್ಬರ ನಡುವಿನ ಕಳೆದ ಎರಡು ವರ್ಷಗಳ ಹಿಂದೆಯೂ ಒಮ್ಮೆ ಪ್ರೇಮಾಂಕುರವಾಗಿ ಜೊತೆಯಾಗಿ ಮನೆ ಬಿಟ್ಟು ತೆರಳಿದ್ದರು. ಬಳಿಕ ಅದು ರಾಜಿ ಪಂಚಾಯಿತಿಕೆಯಲ್ಲಿ ಮುಕ್ತಾಯ ಕಂಡಿತ್ತು ಎನ್ನಲಾಗಿದ್ದು, ಇದೀಗ ಮತ್ತೆ ತಸ್ಲೀಂ ತನ್ನ ಹಳೆ ಚಾಳಿ ಮುಂದುವರಿಸಿ ಮಹಿಳೆಯನ್ನು ಬಲೆಗೆ ಹಾಕಿಕೊಂಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೀಗ ಆರೋಪಿ ತಸ್ಲೀಮ್ ಆರಿಫ್ ಸಂತ್ರಸ್ತೆಯ ಮುಖಕ್ಕೆ, ಮುಸುಡಿಗೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
0 comments:
Post a Comment