ಪುತ್ತೂರು, ಡಿಸೆಂಬರ್ 05, 2023 (ಕರಾವಳಿ ಟೈಮ್ಸ್) : ಪುತ್ತೂರು ನಗರ ಠಾಣಾ ಅಪರಾಧ ಕ್ರಮಾಂಕ 112/2023 ಕಲಂ 457, 380 ಐಪಿಸಿ ಹಾಗೂ ಅಪರಾಧ ಕ್ರಮಾಂಕ 113/2023 ಕಲಂ 379 ಐಪಿಸಿ ಪ್ರಕರಣದ ಆರೋಪಿ, ಚಿಕ್ಕಮಗಳೂರು ಜಿಲ್ಲೆ, ಉಪ್ಪಳ್ಳಿ ವಾಟರ್ ಟ್ಯಾಂಕ್ ಹತ್ತಿರದ ನಿವಾಸಿ ಅಬೂಬಕ್ಕರ್ ಅಲಿಯಾಸ್ ಇತ್ತೆ ಬರ್ಪೆ ಅಬೂಬಕ್ಕರ್ ಎಂಬಾತನನ್ನು ಬಂಧಿಸಿರುವ ಪುತ್ತೂರು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಗೆ ಡಿ 19 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿ ಇತ್ತೆ ಬರ್ಪೆ ಅಬೂಬಕ್ಕರ್ ಮೇಲೆ ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡಬಿದ್ರೆ, ಕಾರ್ಕಳ, ಉಡುಪಿ, ಸುರತ್ಕಲ್, ಚಿಕ್ಕಮಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment