ಬಂಟ್ವಾಳ, ಡಿಸೆಂಬರ್ 16, 2023 (ಕರಾವಳಿ ಟೈಮ್ಸ್) : ಕಳೆದ ನವೆಂಬರ್ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಸಫಲರಾಗಿದ್ದಾರೆ.
ಬಂಧಿತ ಆರೋಪಿಯನ್ನು ಅಸ್ಸಾಂ ಮೂಲದ ಮುಹಮ್ಮದ್ ಶೈರೂಫ್ ಆಲಂ ಎಂದು ಹೆಸರಿಸಲಾಗಿದೆ. ಈತ ಪುದು ಗ್ರಾಮದ ಅಮೆಮಾರ್ ನಿವಾಸಿ ಸಿವಿಲ್ ಇಂಜಿನಿಯರ್ ಹಮ್ಮಬ್ಬ ಮರ್ಝೂಕ್ ಅವರಿಗೆ ಸೇರಿದ ಸುಮಾರು 9.23 ಲಕ್ಷ ರೂಪಾಯಿ ಮೌಲ್ಯದ ಕಟ್ಟಡ ನಿರ್ಮಾಣ ಸಾಮಾಗ್ರಿಗಳಾದ ಕಬ್ಬಿಣದ ಶೀಟ್, ಕಬ್ಬಿಣದ ಜಾಕ್ ಹಾಗೂ ಸ್ಕಫೋಲ್ಡಿಂಗ್ ಸೇರಿದಂತೆ ಒಟ್ಟು 9,23,200/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಮನೆಯ ಶೆಡ್ಡಿನಿಂದ ಕಳವುಗೈದು ಪರಾರಿಯಾಗಿದ್ದ.
ಮೊಹಮ್ಮದ್ ಶರೂಫ್ ಆಲಂ ಸಿವಿಲ್ ಇಂಜಿನಿಯರ್ ಹಮ್ಮಬ್ಬ ಮರ್ಝೂಕ್ ಅವರ ಜತೆ ಕೆಲಸ ಮಾಡುತ್ತಿದ್ದ. ನ 24 ರಿಂದ 27 ರ ನಡುವಿನ ಅವಧಿಯಲ್ಲಿ ಆರೋಪಿ ಈ ಸಾಮಾಗ್ರಿಗಳನ್ನು ಕಳವು ಮಾಡಿದ್ದ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 123/2023 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಯಿಂದ 8.70 ಲಕ್ಷ ರೂಪಾಯಿ ಮೌಲ್ಯದ ಕಬ್ಬಿಣದ ಶೀಟು, ಕಬ್ಬಿಣದ ಜಾಕ್ ಹಾಗೂ ಸ್ಕಪೆÇೀಲ್ಡಿಂಗ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಎಸ್ಪಿ ಸಿ ಬಿ ರಿಷ್ಯಂತ್ ಹಾಗೂ ಅಡಿಶನಲ್ ಎಸ್ಪಿ ಧರ್ಮಪ್ಪ ಎನ್ ಎಂ ಅವರ ನಿರ್ದೇಶನದಂತೆ, ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಬಂಟ್ವಾಳ ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಶಿವಕುಮಾರ್ ಬಿ, ಎಸ್ಸೈಗಳಾದ ಹರೀಶ್ ಎಂ ಆರ್ ಹಾಗೂ ಮೂರ್ತಿ, ಸಿಬ್ಬಂದಿಗಳಾದ ಸುರೇಶ್ ಕುಮಾರ್, ಕೃಷ್ಣ ನಾಯ್ಕ, ಪುನೀತ್ ಕುಮಾರ್, ನಾಗನಾಥ ಅವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
0 comments:
Post a Comment