ಕಡಬ, ಡಿಸೆಂಬರ್ 24, 2023 (ಕರಾವಳಿ ಟೈಮ್ಸ್) : ಕಾರು ಚರಂಡಿಗೆ ಬಿದ್ದು ಚಾಲಕ ಸಹಿತ ಐವರು ಪ್ರಯಾಣಿಕರು ಗಾಯಗೊಂಡ ಘಟನೆ ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಶನಿವಾರ ನಡೆದಿದೆ.
ಗಾಯಾಳುಗಳನ್ನು ಕಾರು ಚಾಲಕ ಮನೋಜ್ ಕುಮಾರ್, ಪ್ರಯಾಣಿಕರಾದ ಮರಿಯಮ್ಮ, ಆನಿ ವರ್ಗೀಸ್, ರಾಜು ವಿ ಎಂ, ಹಾಗೂ ಸಿನ್ಸಿ ಎಂದು ಹೆಸರಿಸಲಾಗಿದೆ. ನಾಲ್ವರು ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಮನೋಜ್ ಕುಮಾರ್ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಪೆರಿಯಶಾಂತಿ ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿ ಚರಂಡಿಗೆ ಬಿದ್ದು ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದಲ್ಲಿ ಕಾರು ಜಖಂಗೊಂಡಿದೆ. ಈ ಬಗ್ಗೆ ಕಡಬ ನಿವಾಸಿ ಅನೀಶ್ ಎ ಎಸ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment