ಬಂಟ್ವಾಳ, ಡಿಸೆಂಬರ್ 29, 2023 (ಕರಾವಳಿ ಟೈಮ್ಸ್) : ಬಸ್ಸು ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯಗೊಂಡ ಘಟನೆ ಕರಿಯಂಗಳ ಗ್ರಾಮದ ಪಲ್ಲಿಪ್ಪಾಡಿ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಗಾಯಾಳು ಸ್ಕೂಟರ್ ಸವಾರರನ್ನು ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ಇವರು ತನ್ನ ಪತ್ನಿ ಸಫಿಯಾ ಅವರನ್ನು ಕುಳ್ಳಿರಿಸಿಕೊಂಡು ಮೂಡಬಿದ್ರೆ ಕಡೆಗೆ ಸಂಚರಿಸುತ್ತಿದ್ದ ವೇಳೆ ಕರಿಯಂಗಳ ಗ್ರಾಮದ ಪಲ್ಲಿಪ್ಪಾಡಿ ಎಂಬಲ್ಲಿಗೆ ತಲುಪಿದಾಗ ಪುಂಚಮೆ ಕಡೆಯಿಂದ ಬರುತ್ತಿದ್ದ ಬಸ್ಸನ್ನು ಕಂಡು ಸ್ಕೂಟರ್ ನಿಲ್ಲಿಸಿದ್ದು, ಈ ಸಂದರ್ಭ ಸಹಸವಾರಿಣಿ ಸಫಿಯಾ ಅವರು ಕೆಳಗಿಳಿದಿದ್ದು, ಇದೇ ವೇಳೆ ಬಸ್ಸು ಚಾಲಕ ಇಲ್ಲಿನ ತಿರುವು ರಸ್ತೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಸಂಚಾರದ ಮೂಲಕ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಸ್ಕೂಟರ್ ಸವಾರ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಗಾಯಾಳು ಅಬ್ದುಲ್ ಖಾದರ್ ಅವರ ಭಾವ ಮಹಮ್ಮದ್ ಅನ್ವರ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
0 comments:
Post a Comment