ಉಪ್ಪಿನಂಗಡಿ, ಡಿಸೆಂಬರ್ 18, 2023 (ಕರಾವಳಿ ಟೈಮ್ಸ್) : ಕಾರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂಡಿಎಂಎ ಸಾಗಾಟ ಬೇಧಿಸಿದ ಉಪ್ಪಿನಂಗಡಿ ಪೊಲೀಸರು ಮಾದಕ ವಸ್ತು ಸಹಿತ ಆರೋಪಿಯನ್ನು ಬಂಧಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮದ ನಿವಾಸಿ ಯಾಸಿರ್ (29) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಉಪ್ಪಿನಂಗಡಿ ಗ್ರಾಮದ ಕೂಟೇಲು ದರ್ಗಾ ಶರೀಫ್ ಬಳಿ ಉಪ್ಪಿನಂಗಡಿ ಪೆÇಲೀಸ್ ಠಾಣಾ ಪಿಎಸ್ಸೈ ರಾಜೇಶ್ ಕೆ ವಿ ನೇತೃತ್ವದ ಪೊಲೀಸರು ವಾಹನ ತಪಾಸಣೆಯ ನಡೆಸುತ್ತಿದ್ದ ವೇಳೆ ಅಕ್ರಮ ಮಾದಕ ವಸ್ತು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ಕಾರನ್ನು ಪೊಲೀಸರು ಪರಿಶೀಲನೆ ನಡೆಸಿದಾಗ 13 ಸಾವಿರ ರೂಪಾಯಿ ಮೌಲ್ಯದ 6.4 ಗ್ರಾಂ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ. ಪರಾರಿಯಾಗಲು ಯತ್ನಿಸಿದ ಆರೋಪಿ ಯಾಸೀರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಕಾರು, ಕಾರಿನಲ್ಲಿದ್ದ ಚಿಕ್ಕ ಎಲೆಕ್ಟ್ರೋನಿಕ್ ಡಿಜಿಟಲ್ ತೂಕ ಮಾಪನ ಸಾಧನ, ಮೊಬೈಲ್ ಫೋನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment