ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಎಂಸಿಸಿ ಬ್ಯಾಂಕ್ ಚೆಯರ್‍ಮೆನ್ ಅನಿಲ್ ಲೋಬೋಗೆ ಬಂಟ್ವಾಳ ಅಭಿಮಾನಿ ಬಳಗದಿಂದ ಅಭಿನಂದನೆ
ಬಂಟ್ವಾಳ, ಡಿಸೆಂಬರ್ 23, 2023 (ಕರಾವಳಿ ಟೈಮ್ಸ್) : ಸಮಾಜದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡುವಾಗ ಆರೋಪಗಳು, ತೆಗಳಿಕೆಗಳು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅದೆಲ್ಲದಕ್ಕೂ ಕಿವುಡರಾಗಿ, ಕುರುಡರಾಗಿ ತಮ್ಮ ಹೆಜ್ಜೆಯನ್ನು ಸಮಾಜದ ಒಳಿತಿಗಾಗಿ ಗಟ್ಟಿಯಾಗಿ ತುಳಿದಾಗ ಯಶಸ್ಸು ತನ್ನಿಂತಾನೆ ಅರಸಿ ಬರುತ್ತದೆ ಎಂಬುದಕ್ಕೆ ಎಂಸಿಸಿ ಬ್ಯಾಂಕ್ ಚೆಯರ್‍ಮೆನ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಅನಿಲ್ ಲೋಬೋ ಒಂದು ಸ್ಪಷ್ಟ ಉದಾಹರಣೆಯಾಗಿದ್ದಾರೆ ಎಂದು ಫರ್ಲಾ ವೆಲಂಕಣಿ ಇಗರ್ಜಿ ಧರ್ಮಗುರು ವಂದನೀಯ ಜೋನ್ ಪ್ರಕಾಶ್ ಪಿರೇರಾ ಕೊಂಡಾಡಿದರು.
ಎಂಸಿಸಿ ಬ್ಯಾಂಕ್ ಅಭಿಮಾನಿ ಬಳಗ ಬಂಟ್ವಾಳ ಇದರ ವತಿಯಿಂದ ಶುಕ್ರವಾರ ಸಂಜೆ ಬಿ ಸಿ ರೋಡಿನ ಲಯನ್ಸ್ ಸೇವಾ ಮಂದಿರಲ್ಲಿ ನಡೆದ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಅನಿಲ್ ಲೋಬೋ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 112 ವರ್ಷಗಳ ಇತಿಹಾಸವಿರುವ ಎಂಸಿಸಿ ಬ್ಯಾಂಕ್ ಉನ್ನತಿಯ ಹಿಂದೆ ಹಲವರ ಶ್ರಮ ಇದೆ. ಇದೀಗ ಅದನ್ನು ಶತಮಾನದ ಹೊಸ್ತಿಲು ದಾಟಿ ಮುನ್ನಡೆಸುತ್ತಿರುವ ಅನಿಲ್ ಲೋಬೋ ಅವರ ಹಾಗೂ ಅವರ ತಂಡದ ಶ್ರಮಕ್ಕೆ ದೇವರ ಅನುಗ್ರಹ ಇರಲಿ. ಈ ಬ್ಯಾಂಕ್ ಶತಮಾನಗಳಷ್ಟು ಹಳೆಯದಾದರೂ ಅದನ್ನು ಪುರಾತನ ಎನ್ನದೆ ಅದು ಇನ್ನೂ ಯೌವನಾವಸ್ಥೆಯಲ್ಲಿದೆ ಎನ್ನಿ. ಅನಿಲ್ ಲೋಬೋ ಅವರ ನೇತೃತ್ವದಲ್ಲಿ ಹಾಗೂ ಮುಂದಿನ ತಲೆಮಾರಿನ ಜನರ ಮುಂದಾಳುತ್ವದಲ್ಲಿ ಸಮಾಜಕ್ಕಾಗಿ, ಸಮುದಾಯಕ್ಕಾಗಿ ಈ ಬ್ಯಾಂಕ್ ಇನ್ನೂ ಹಲವು ವರ್ಷಗಳ ಕಾಲ ಸೇವೆ ನೀಡಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹಕಾರ ರತ್ನ ಪುರಸ್ಕøತ ಎಂಸಿಸಿ ಬ್ಯಾಂಕ್ ಚೆಯರ್‍ಮೆನ್ ಅನಿಲ್ ಲೋಬೋ ಮಾತನಾಡಿ, ಎಂಸಿಸಿ ಬ್ಯಾಂಕ್ ಎಂಬುದು ಯಾರೋ ಸಮುದ್ರಕ್ಕೆ ಇಳಿಸಿಬಿಟ್ಟ ದೋಣಿಯಾಗಿದೆ. ನಾವು ಅದನ್ನು ಸಾಗರದ ಮಧ್ಯೆ ದಡ ಸೇರಿಸಲು ಪ್ರಯತ್ನಪಡುತ್ತಿದ್ದೇವೆ. ಈ ನಡುವೆ ಪ್ರಶಸ್ತಿ-ಪುರಸ್ಕಾರ, ಅಭಿನಂದನೆಗಳು ಸಾಮಾನ್ಯವಾಗಿ ಬರುತ್ತಿದೆ. ಅದರಿಂದ ಹಿಗ್ಗದೆ ಸಮಾಜಕ್ಕಾಗಿ ಇನ್ನಷ್ಟು ಕೆಲಸ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸುತ್ತೇನೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಅಧೀಕ್ಷಕ ಪ್ರವೀಣ್ ಬಿ ನಾಯಕ್ ಕೆಸಿಎಸ್ ಎಂಸಿಸಿ ಬ್ಯಾಂಕ್ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗೂಡಿನಬಳಿ-ಬಿ ಮೂಡ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅವರು ಸಹಕಾರ ಚಳುವಳಿಯ ಇತಿಹಾಸದ ಬಗ್ಗೆ ವಿವರಿಸಿ ಶುಭ ಹಾರೈಸಿದರು.
ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ, ನೋಟರಿ-ನ್ಯಾಯವಾದಿ ಅರುಣ್ ರೋಶನ್ ಡಿ’ಸೋಜ, ಎಂಸಿಸಿ ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿ’ಸಿಲ್ವ, ಕೆಥೋಲಿಕ್ ಸಭಾ ಬಂಟ್ವಾಳ ವಲಯ ಸಮಿತಿ ಅಧ್ಯಕ್ಷೆ ಶ್ರೀಮತಿ ಫ್ಲೇವಿ ಡಿ’ಸೋಜ, ಎಂಸಿಸಿ ಬ್ಯಾಂಕ್ ನಿರ್ದೇಶಕ ವಿನ್ಸೆಂಟ್ ಲಸ್ರಾದೋ ಶುಭ ಹಾರೈಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ, ಅಭಿನಂದನಾ ಸಮಾರಂಭ ಸಮಿತಿಯ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್ ಅಭಿನಂದನಾ ಭಾಷಣ ಮಾಡಿದರು. ಸಂದೀಪ್ ಮೆನೇಜಸ್ ಸ್ವಾಗತಿಸಿ ಪ್ರಸ್ತಾವನೆಗೈದರು. ವಾಲ್ಟರ್ ನೊರೊನ್ಹಾ ವಂದಿಸಿದರು. ಸುನಿಲ್ ವೇಗಸ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಟೀಂ ವಿಂಟರ್ ಟೈಂ ಪಂಗಡದವರಿಂದ ಕ್ರಿಸ್ಮಸ್ ಕಾರ್ಲೋಸ್ ಹಾಗೂ ಕ್ರಿಸ್ಮಸ್ ಸಹಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
0 comments:
Post a Comment