ಕಡಬ, ಡಿಸೆಂಬರ್ 16, 2023 (ಕರಾವಳಿ ಟೈಮ್ಸ್) : ತಂದೆ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದ ಜುಪಿಟರ್ ಸ್ಕೂಟರಿಗೆ ನ್ಯಾನೋ ಕಾರು ಡಿಕ್ಕಿ ಹೊಡೆದು ಶಾಲಾ ಬಾಲಕ ಮೃತಪಟ್ಟು ಇನ್ನಿಬ್ಬರು ಗಾಯಗೊಂಡ ಘಟನೆ ಕಡಬ ತಾಲೂಕಿನ ಕಳಾರ ಮಸೀದಿ ಬಳಿ ಶುಕ್ರವಾರ ರಾತ್ರಿ ವೇಳೆ ನಡೆದಿದೆ.
ಮೃತ ಬಾಲಕನನ್ನು ಇಲ್ಲಿನ ಸರಸ್ವತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಬಿಪಿನ್ ರೈ (13) ಎಂದು ಹೆಸರಿಸಲಾಗಿದ್ದು, ಈತನ ತಂದೆ ಚಂದ್ರಶೇಖರ ರೈ (42) ಹಾಗೂ ಪುತ್ರಿ ಆತ್ಮೀ ಸಿ ರೈ (10) ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರ ರಾತ್ರಿ ಶಾಲಾ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ವೇಳೆ ಮನೆಗೆ ಅನತಿ ದೂರದಲ್ಲಿ ಸ್ಕೂಟರಿಗೆ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಕಾರು ಚಾಲಕ ಪರಮೇಶ್ವರ ಭಟ್ ಅವರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment