ಮಂಗಳೂರು, ಡಿಸೆಂಬರ್ 09, 2023 (ಕರಾವಳಿ ಟೈಮ್ಸ್) : ಕೋಟೆಕಾರು-ಕೆ.ಸಿ.ರೋಡು ಮುಬಾರಕ್ ಜುಮಾ ಮಸೀದಿ ವತಿಯಿಂದ 33ನೇ ದ್ಸಿಕ್ರ್ ವಾರ್ಷಿಕೋತ್ಸವ ಹಾಗೂ 8 ದಿನಗಳ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವು ಡಿಸೆಂಬರ್ 10 ರಿಂದ 17ರವರೆಗೆ ಇಲ್ಲಿನ ಮುಬಾರಕ್ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಡಿಸೆಂಬರ್ 10 ರಂದು ಭಾನುವಾರ ಸಂಜೆ 7.30 ಗಂಟೆಗೆ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಖಾಝಿ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಅವರು ಉದ್ಘಾಟನೆ ಹಾಗೂ ದುವಾ ನೇತೃತ್ವ ವಹಿಸುವರು. ಮಸೀದಿ ಅಧ್ಯಕ್ಷ ಎ ಎಂ ಅಬ್ಬಾಸ್ ಹಾಜಿ ಕೊಮರಂಗಳ ಅಧ್ಯಕ್ಷತೆ ವಹಿಸುವರು. ಕೆ ಪಿ ಹುಸೈನ್ ಸಅದಿ ಕೆಸಿರೋಡು ಉಪಸ್ಥಿತರಿರುವರು. ಮುನೀರ್ ಸಖಾಫಿ ಕೆ ಸಿ ರೋಡು ಮುಖ್ಯ ಭಾಷಣಗೈಯುವರು. ಕೆ ಸಿ ರೋಡು ಮಸೀದಿ ಸಹ ಮುದರ್ರಿಸ್ ಮಸ್-ಊದ್ ಹಿಮಮಿ ಸಖಾಫಿ ಉಪಸ್ಥಿತರಿರುವರು.
ಪ್ರತಿದಿನ ದಿನ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಡಿ 11 ರಂದು ಅಶ್ರಫ್ ರಹ್ಮಾನಿ ಚೌಕಿ, ಡಿ 12 ರಂದು ನೌಫಲ್ ಸಖಾಫಿ ಕಳಸ, ಡಿ 13 ರಂದು ಅಶ್ಫಾಕ್ ಫೈಝಿ ಕಾಸರಗೋಡು, ಡಿ 14 ರಂದು ಮುಹಮ್ಮದ್ ಸಖಾಫಿ ಪಾತೂರು, ಡಿ 15 ರಂದು ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಡಿ 16 ರಂದು ಕೆ ಪಿ ಹುಸೈನ್ ಸಖಾಫಿ ಕೆ ಸಿ ರೋಡು ಉಪನ್ಯಾಸಗೈಯುವರು.
ಡಿ 17 ರಂದು ಸಂಜೆ 6.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನೇತೃತ್ವ ವಹಿಸಲಿದ್ದು, ಕೆ ಪಿ ಹುಸೈನ್ ಸಅದಿ ಕೆ ಸಿ ರೋಡು ಮುಖ್ಯ ಭಾಷಣಗೈಯುವರು. ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ಕೆ ಸಿ ರೋಡು ಮುದರ್ರಿಸ್ ಮುನೀರ್ ಸಖಾಫಿ ಅಲ್-ಫುರ್ಖಾನಿ, ಉಚ್ಚಿಲ 407 ಜುಮಾ ಮಸೀದಿ ಮುದರ್ರಿಸ್ ಇಬ್ರಾಹಿಂ ಫೈಝಿ, ತಲಪಾಡಿ ಬಿಲಾಲ್ ಜುಮಾ ಮಸೀದಿ ಖತೀಬ್ ಡಾ ಎಂ ಎಸ್ ಎಂ ಅಬ್ದುರ್ರಶೀದ್ ಝೈನಿ ಅಲ್-ಕಾಮಿಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಕೆ ಸಿ ರೋಡು ಮುಬಾರಕ್ ಜುಮಾ ಮಸೀದಿ ಪ್ರಕಟಣೆ ತಿಳಿಸಿದೆ.
0 comments:
Post a Comment