ಸುಳ್ಯ, ಡಿಸೆಂಬರ್ 02, 2023 (ಕರಾವಳಿ ಟೈಮ್ಸ್) : ತಾಲೂಕಿನ ಸುಳ್ಯ ಕಸಬಾ ಗ್ರಾಮದ ಕನಿಕರಪಳ್ಳ-ಜಟ್ಟಿಪಳ್ಳದಲ್ಲಿ ಅ 10 ರಂದು ನಡೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣ ಬೇಧಿಸಿದ ಸುಳ್ಯ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಜಟ್ಟಿಪಳ್ಳದಲ್ಲಿ ಕಳೆದ ಅ 9 ರಂದು ನಡೆದಿದ್ದ ಸುಮಾರು 15 ಲಕ್ಷದ ಹದಿಮೂರು ಸಾವಿರದ ಮುನ್ನೂರ ತೊಂಭತ್ತೊಂದು ರೂಪಾಯಿ ಮೌಲ್ಯದ ಚಿನ್ನಾಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾರ್ಯಾಚರಣೆ ನಡೆಸಿದ ಸುಳ್ಯ ಪೊಲೀಸರು ಆರೋಪಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೆರಿಯತ್ತಡ್ಕ-ಹೊಸದುರ್ಗ ನಿವಾಸಿ ಆಸೀಮ್ ಅಲಿಯಾಸ್ ಆಸೀಮ್ ಖುನಿಯ ಬಿನ್ ಹಸನ್ ತಂಗಳ್ (43) ಎಂಬಾತನನ್ನು ಶನಿವಾರ (ಡಿ 2) ಬೆಳಿಗ್ಗೆ ಜಾಲ್ಸೂರಿನ ಬಸ್ ನಿಲ್ದಾಣದ ಬಳಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
0 comments:
Post a Comment