ಬಂಟ್ವಾಳ, ಡಿಸೆಂಬರ್ 21, 2023 (ಕರಾವಳಿ ಟೈಮ್ಸ್) : ಗದ್ದೆಯಲ್ಲಿ ಮೇಯಲು ಕಟ್ಟಲಾಗಿದ್ದ ಕೋಣಗಳು ಕಳವಾಗಿರುವ ಘಟನೆ ಅಮ್ಮುಂಜೆ ಗ್ರಾಮದಲ್ಲಿ ಕಳೆದ ಭಾನುವಾರ ನಡೆದಿದ್ದು, ಈ ಬಗ್ಗೆ ಗುರುವಾರ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮ್ಮುಂಜೆ ಗ್ರಾಮದ ನಿವಾಸಿ ವಿನಯ ಬಲ್ಯಾಯ (52) ಅವರು ಕಳೆದ ಭಾನುವಾರ ತನ್ನ ಮನೆ ಸಮೀಪದ ಗದ್ದೆಯಲ್ಲಿ 3 ಕೋಣಗಳನ್ನು ಮೇಯಲು ಕಟ್ಟಿದ್ದು, ಸಂಜೆ ವೇಳೆಗೆ ಕಾಣದಿದ್ದು, ಅವುಗಳನ್ನು ಯಾರೋ ಕಳವುಗೈದಿದ್ದಾರೆ. ಕಳವಾದ ಕೋಣಗಳ ಅಂದಾಜು ಮೌಲ್ಯ 90 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment