ಬಂಟ್ವಾಳ, ಡಿಸೆಂಬರ್ 10, 2023 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಗುಡುಗು-ಸಿಡಿಲು, ಮಿಂಚು ಸಹಿತ ಭಾರೀ ಮಳೆಯಾಗುತ್ತಿದ್ದು, ವಿವಿಧೆಡೆ ಹಾನಿಯುಂಟಾದ ಘಟನೆ ವರದಿಯಾಗಿದೆ.
ಪುಣಚ ಗ್ರಾಮದ ಕುಟ್ಟಿತ್ತಡ್ಕ ನಿವಾಸಿ ಅಬ್ದುಲ್ಲ ಬ್ಯಾರಿ ಅವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿರುತ್ತದೆ. ಅಳಿಕೆ ಗ್ರಾಮದ ಕುಡಿಯಾರಮೂಲೆ ನಿವಾಸಿ ಐತ್ತಪ್ಪ ನಾಯ್ಕ್ ಅವರ ಮನೆಗೆ ಸಿಡಿಲು ಬಡಿದು ಸುಮಾರು ಹಾನಿಯಾಗಿದ್ದು, ಸುಮಾರು 25 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ.
ವಿಟ್ಲ ಹೋಬಳಿ ವ್ಯಾಪ್ತಿಯ ವಿಟ್ಲ ಕಸಬ ಗ್ರಾಮದ ಕಾನತ್ತಡ್ಕ ನಿವಾಸಿ ಯೋಗೀಶ್ ಬಿನ್ ಅಂತಪ್ಪ ಬೆಲ್ಚಡ ಅವರ ಮನೆಗೆ ಸಿಡಿಲು ಬಡಿದು ಮನೆಯ ವಯರಿಂಗ್ ಹಾಗೂ ಗೋಡೆಗೆ ಹಾನಿ ಸಂಭವಿಸಿದೆ. ಕನ್ಯಾನ ಗ್ರಾಮದ ಕನ್ಯಾನ ಪೇಟೆ ನಿವಾಸಿ ನಾರಾಯಣ ಶೆಟ್ಟಿ ಅವರ ಮಾಲಕತ್ವದ ರಾಧಾಕೃಷ್ಣ ಶೆಟ್ಟಿ ಎಂಬವರು ನಡೆಸುತ್ತಿರುವ ಬೇಕರಿ ತಿಂಡಿ ತಯಾರಿಸುವ ಕೊಠಡಿಗೆ ಸಿಡಿಲು ಬಡಿದು ಹಾನಿಯಾಗಿರುತ್ತದೆ. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
0 comments:
Post a Comment