ಬಂಟ್ವಾಳ, ಡಿಸೆಂಬರ್ 14, 2023 (ಕರಾವಳಿ ಟೈಮ್ಸ್) : ಅಂಗಡಿ ಬಳಿ ಬಂದಿದ್ದ ವಯೋವೃದ್ದೆಯ ಕುತ್ತಿಗೆಯಲ್ಲಿದ್ದ ಒಂದೂವರೆ ಪವನ್ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಕಸಿದುಕೊಂಡು ಪರಾರಿಯಾದ ಘಟನೆ ಗುರುವಾರ ಮಧ್ಯಾಹ್ನ ಬಿ ಮೂಡ ಗ್ರಾಮದ ಅಜ್ಜಿಬೆಟ್ಟು ಮೈದಾನದ ಬಳಿ ನಡೆದಿದೆ.
ಬಿ ಮೂಡ ಗ್ರಾಮದ ನಿವಾಸಿ ಸರೋಜನಿ (72) ಅವರು ಗುರುವಾರ ಮಧ್ಯಾಹ್ನ ಇಲ್ಲಿನ ಅಜ್ಜಿಬೆಟ್ಟು ಮೈದಾನ ಬಳಿ ಜನರಲ್ ಸ್ಟೋರ್ ಅಂಗಡಿಯಲ್ಲಿದ್ದಾಗ, ಬೈಕಿನಲ್ಲಿ ಇಬ್ಬರು ಬಂದು, ಹಿಂಬದಿ ಸವಾರ ಸರೋಜಿನಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಒಂದೂವರೆ ಪವನ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಬಂದ ಬೈಕಿನಲ್ಲಿ ಪರಾರಿಯಾಗಿರುತ್ತಾರೆ.
ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸರ ಕಳ್ಳರಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
0 comments:
Post a Comment