ಬಂಟ್ವಾಳ, ಡಿಸೆಂಬರ್ 13, 2023 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಪುದು ಗ್ರಾಮದ ಫರಂಗಿಪೇಟೆ ಸಮೀಪದ ಕೋಡಿಮಜಲು ನಿವಾಸಿ ಮೊಹಮ್ಮದ್ ಜಾಫರುಲ್ಲಾ ಅವರ ಮನೆಯಲ್ಲಿ ಅ 18 ರಿಂದ 23ರ ಅವಧಿಯಲ್ಲಿ ನಡೆದ 27.5 ಲಕ್ಷ ರೂಪಾಯಿ ನಗದು ಹಾಗೂ 4.96 ಲಕ್ಷ ರೂಪಾಯಿ ಬೃಹತ್ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಇಬ್ಬರು ಖದೀಮರನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಅಶ್ರಫ್ ಅಲಿ ಹಾಗೂ ಕಬೀರ್ ಬೆಂಗ್ರೆ ಎಂದು ಹೆಸರಿಸಲಾಗಿದೆ. ಉದ್ಯಮಿ ಮೊಹಮ್ಮದ್ ಜಾಫರುಲ್ಲಾ ಅವರ ಮನೆಯಿಂದ ಕಳೆದ ಅ 18 ರಿಂದ 23ರ ಮಧ್ಯೆಯ ಅವಧಿಯಲ್ಲಿ ಮನೆ ಮಂದಿ ನೆಂಟಸ್ಥಿಕೆ ಕಟ್ಟಿದ್ದ ಅವಧಿಯಲ್ಲಿ ಅವರ ಜೊತೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದ ಆರೋಪಿಗಳು 27,50,000/- ನಗದು ಹಾಗೂ 4,96,000 /- ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಘಟನೆ ನಡೆದಿತ್ತು.
ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಸೋಮವಾರ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 4,50,000/- ಮೌಲ್ಯದ ಚಿನ್ನಾಭರಣಗಳು ಹಾಗೂ 4 ಲಕ್ಷ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
0 comments:
Post a Comment