ಕಡೇಶ್ವಾಲ್ಯ : ಟ್ಯಾಂಕರಿಂದ ಅಕ್ರಮ ಡಾಮರು ಕಳ್ಳತನ ಪ್ರಕರಣ ಬೇಧಿಸಿದ ಅಪರಾಧ ವಿಭಾಗದ ಪೊಲೀಸರು, 10 ಮಂದಿ ಆರೋಪಿಗಳ ಸಹಿತ ಸೊತ್ತುಗಳು ವಶಕ್ಕೆ - Karavali Times ಕಡೇಶ್ವಾಲ್ಯ : ಟ್ಯಾಂಕರಿಂದ ಅಕ್ರಮ ಡಾಮರು ಕಳ್ಳತನ ಪ್ರಕರಣ ಬೇಧಿಸಿದ ಅಪರಾಧ ವಿಭಾಗದ ಪೊಲೀಸರು, 10 ಮಂದಿ ಆರೋಪಿಗಳ ಸಹಿತ ಸೊತ್ತುಗಳು ವಶಕ್ಕೆ - Karavali Times

728x90

9 December 2023

ಕಡೇಶ್ವಾಲ್ಯ : ಟ್ಯಾಂಕರಿಂದ ಅಕ್ರಮ ಡಾಮರು ಕಳ್ಳತನ ಪ್ರಕರಣ ಬೇಧಿಸಿದ ಅಪರಾಧ ವಿಭಾಗದ ಪೊಲೀಸರು, 10 ಮಂದಿ ಆರೋಪಿಗಳ ಸಹಿತ ಸೊತ್ತುಗಳು ವಶಕ್ಕೆ

ಬಂಟ್ವಾಳ, ಡಿಸೆಂಬರ್ 09, 2023 (ಕರಾವಳಿ ಟೈಮ್ಸ್) : ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಅಮೈ ಎಂಬಲ್ಲಿ ಎಂ ಆರ್ ಪಿ ಎಲ್ ಸಂಸ್ಥೆಯಿಂದ ಡಾಮರು ಲೋಡ್ ಮಾಡಿಕೊಂಡು ಬಂದ ಟ್ಯಾಂಕರುಗಳಿಂದ ಅಕ್ರಮವಾಗಿ ಬೇರೆ ಟ್ಯಾಂಕರುಗಳಿಗೆ ವರ್ಗಾಯಿಸಿ ಕಳ್ಳತನ ಮಾಡುತ್ತಿದ್ದ ಪ್ರಕರಣವನ್ನು ಶುಕ್ರವಾರ ಬೇಧಿಸಿದ ಸೆನ್ ಅಪರಾಧ ಠಾಣಾ ಪೊಲೀಸರು ಹತ್ತು ಲಾರಿ, ಕೃತ್ಯಕ್ಕೆ ಬಳಸಿದ ಇತರ ಸೊತ್ತುಗಳ ಸಹಿತ ಹತ್ತು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. 

ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ವಿಜಯ ಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ @ಸುಧಾಕರ, ಮಹಮ್ಮದ್ ಇಮ್ರಾನ್, ಅಶ್ರಫ್ ಎಂ, ವಿರೇಂದ್ರ. ಎಸ್ ಆರ್, ಮಾದಸ್ವಾಮಿ, ಪ್ರಭಾಕರನ್, ನವೀನ್ ಕುಮಾರ್ ಎಂ ಜಿ, ಮಹಮ್ಮದ್ ನಿಸಾರ್ ಹಾಗೂ ಮಹಮ್ಮದ್ ಸಿಹಾಬುದ್ದೀನ್ ಎಂದು ಹೆಸರಿಸಲಾಗಿದೆ. 

ಸಿಇಎನ್ ಅಪರಾಧ ಪೆÇಲೀಸ್ ಠಾಣೆಯ ಪೆÇಲೀಸ್ ಉಪನಿರೀಕ್ಷಕ ಮಂಜುನಾಥ್ ಟಿ ಹಾಗೂ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ದಾಳಿ ವೇಳೆ ಸ್ಥಳದಲ್ಲಿದ್ದ ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಿಸಿದಾಗ ಉಡುಪಿಯ ವಿಜಯ ಕುಮಾರ್ ಶೆಟ್ಟಿ ಎಂಬವರ ಸೂಚನೆಯಂತೆ, ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಸುಧಾಕರ ಶೆಟ್ಟಿ ಅಲಿಯಾಸ್ ಸುಧಾಕರ ಕೊಟ್ಟಾರಿ ಎಂಬರೊಂದಿಗೆ ಸೇರಿ ಈ ಕೃತ್ಯ ನಡೆಸುತ್ತಿರುವುದಾಗಿ ಹೇಳಿದ್ದಾರೆ. 

ದಾಳಿ ವೇಳೆ ಸ್ಥಳದಲ್ಲಿದ್ದ ಎಪಿ03 ಎಕ್ಸ್ 6149, ಕೆಎಲ್34 ಸಿ3968, ಕೆಎ19 ಎಸಿ4077, ಕೆಎ19 ಎಸಿ8686, ಕೆಎ19 ಎಎ7342 ಹಾಗೂ ಕೆಎ19 ಎಡಿ6595 ನೋಂದಣಿ ಸಂಖ್ಯೆಯ ಟ್ಯಾಂಕರ್ ಲಾರಿಗಳನ್ನು, ಡಾಮಾರ್ ಕಳ್ಳತನ ಮಾಡಲು ಉಪಯೋಗಿಸಿದ ತೂಕ ಮಾಪನ, ಡಾಮಾರ್ ಬಿಸಿ ಮಾಡಲು ಉಪಯೋಗಿಸಿದ ಗ್ಯಾಸ್ ಸಿಲಿಂಡರ್, ಡಾಮಾರ್ ತುಂಬಿಸಲು ಬಳಸಿರುವ ಕಬ್ಬಿಣದ ಟ್ಯಾಂಕ್ ಹಾಗೂ ಆರೋಪಿಗಳ ವಶದಲ್ಲಿದ್ದ 9 ಮೊಬೈಲ್ ಫೆÇೀನುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಆರೋಪಿಗಳ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 122/2023 ಕಲಂ 379, 417, 420, 285 ಐಪಿಸಿಯಂತೆ ಮತ್ತು ಕಲಂ 23 ಪೆಟ್ರೋಲಿಯಂ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಡೇಶ್ವಾಲ್ಯ : ಟ್ಯಾಂಕರಿಂದ ಅಕ್ರಮ ಡಾಮರು ಕಳ್ಳತನ ಪ್ರಕರಣ ಬೇಧಿಸಿದ ಅಪರಾಧ ವಿಭಾಗದ ಪೊಲೀಸರು, 10 ಮಂದಿ ಆರೋಪಿಗಳ ಸಹಿತ ಸೊತ್ತುಗಳು ವಶಕ್ಕೆ Rating: 5 Reviewed By: karavali Times
Scroll to Top