ಬಂಟ್ವಾಳ, ಡಿಸೆಂಬರ್ 03, 2023 (ಕರಾವಳಿ ಟೈಮ್ಸ್) : ದೂರವಾಣಿ ಕರೆಯ ತಕರಾರಿನ ಬಗ್ಗೆ ಮಾತನಾಡಲು ತೆರಳಿದ ವೇಳೆ ವ್ಯಕ್ತಿಗೆ ಹಾಗೂ ತಾಯಿ-ಪತ್ನಿಗೆ ಇಬ್ಬರು ಆರೋಪಿಗಳು ಸೇರಿ ಹಲ್ಲೆ ನಡೆಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬಂಟ್ವಾಳ ನಿವಾಸಿ ಉಬೈದುಲ್ಲಾ (35) ಎಂಬವರು ಠಾಣೆಗೆ ದೂರು ನೀಡಿದ್ದು, ತನ್ನ ಹೆಂಡತಿಗೆ ಹ್ಯಾರೀಸ್ ಎಂಬಾತ ದೂರವಾಣಿ ಕರೆಯಲ್ಲಿ ಮಾತನಾಡಿದ ವಿಚಾರದಲ್ಲಿ ಮಾತುಕತೆ ನಡೆಸುವ ಸಲುವಾಗಿ ನ 30 ರಂದು ಸಂಜೆ ಕೊಳ್ನಾಡು ಗ್ರಾಮದ ಸಾಲೆತ್ತೂರು ಮೈದಾನದ ಬಳಿ ತನ್ನ ಸಂಬಂದಿಕರೊಂದಿಗೆ ಹೋದಾಗ, ಅಲ್ಲಿದ್ದ ಆರೋಪಿಗಳಾದ ಅಬ್ದುಲ್ ಖಾದರ್ ಮತ್ತು ಬಶೀರ್ ಎಂಬವರು ಉಬೈದುಲ್ಲಾ ಅವರ ಕಾಲರ್ ಪಟ್ಟಿ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಎದೆಗೆ ಗುದ್ದಿರುತ್ತಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಂದುವರಿದು ಡಿ 1 ರಂದು ಉಬೈದುಲ್ಲಾ ಅವರು ತಾಯಿ ಮತ್ತು ಪತ್ನಿಯೊಂದಿಗೆ ಸಾಲೆತ್ತೂರು ಜಂಕ್ಷನ್ ಬಳಿ ತೆರಳಿ, ಉಬೈದುಲ್ಲಾ ಅವರ ತಾಯಿಯು ಆರೋಪಿಗಳಾದ ಅಬ್ದುಲ್ ಖಾದರ್ ಮತ್ತು ಬಶೀರ್ ಅವರಲ್ಲಿ, ತನ್ನ ಮಗನಿಗೆ ಯಾಕೆ ಬೈದು ಹಲ್ಲೆ ಮಾಡಿದ್ದು ಎಂದು ಕೇಳಿದಕ್ಕೆ ಆರೋಪಿ ಬಶೀರ್ ತಾಯಿಗೆ ಬೈದು, ನಿನ್ನ ಮಗನನ್ನು ಕೊಲ್ಲುತ್ತೇವೆ ಎಂದು ಹೇಳಿ ಹೊಡೆಯಲು ಬಂದಿರುತ್ತಾನೆ, ಈ ವೇಳೆ ಉಬೈದುಲ್ಲಾ ಪತ್ನಿ ಅವರು ತಾಯಿಗೆ ಹೊಡೆಯುವುದನ್ನು ತಡೆಯಲು ಬಂದಾಗ ಆರೋಪಿ ಬಶೀರ್ ಎಂಬಾತ ಉಬೈದುಲ್ಲಾರ ಹೆಂಡತಿಯೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿರುತ್ತಾನೆ. ಅಬ್ದುಲ್ ಖಾದರ್ ಎಂಬಾತ ಉಬೈದುಲ್ಲಾಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡ ಉಬೈದುಲ್ಲಾ ಅವರು ವಿಟ್ಲ ಸಮುದಾಯ ಆರೊಗ್ಯೆ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 200/2023 ಕಲಂ 504, 323, 354, 506 ಆರ್/ಡಬ್ಲ್ಯು 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment