ಬಂಟ್ವಾಳ, ಡಿಸೆಂಬರ್ 24, 2023 (ಕರಾವಳಿ ಟೈಮ್ಸ್) : ಮಹಿಳೆಯೋರ್ವರ ಜಮೀನಿಗೆ ಅಕ್ರಮ ಪ್ರವೇಶಿಸಿದ ತಂಡವೊಂದು ಮರ ಕಡಿಯಲು ಯತ್ನಿಸಿದ್ದಲ್ಲದೆ ಪ್ರಶ್ನಿಸಿದ ಮನೆ ಮಾಲಕಿಗೆ ಹಲ್ಲೆ ನಡೆಸಿದ್ದಲ್ಲದೆ ಜೀವ ಬೆದರಿಕೆ ಒಡ್ಡಿ ಪರಾರಿಯಾದ ಘಟನೆ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಏಮಾಜೆ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಟ್ಲ ಮುಡ್ನೂರು ಗ್ರಾಮದ ಏಮಾಜೆ ನಿವಾಸಿ ಹೇಮಾವತಿ ಮೋಹನ್ (56) ಅವರು ಈ ಬಗ್ಗೆ ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಹೇಮಾವತಿ ಅವರ ಏಮಾಜೆಯಲ್ಲಿರುವ ಜಮೀನಿಗೆ ಆರೋಪಿಗಳಾದ ಸುಮತಿ ಮತ್ತು ಅವರ ಮನೆಯವರು ಹಾಗೂ ಚಂದ್ರಹಾಸ ನಲ್ಕೆ ಎಂಬವರ ಜೊತೆ ಅಕ್ರಮ ಕೂಟ ಸೇರಿಕೊಂಡು ಅಕ್ರಮ ಪ್ರವೇಶ ಮಾಡಿ ಮರಗಳನ್ನು ಕಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಹೇಮಾವತಿ ಅವರು ಪ್ರಶ್ನಿಸಿದಕ್ಕೆ ಅವ್ಯಾಚ ಶಬ್ದಗಳಿಂದ ಬೈದು ಚಂದ್ರಹಾಸ ಮತ್ತು ಸುಮತಿ ಅವರು ಹೇಮಾವತಿ ಅವರಿಗೆ ಹಲ್ಲೆ ನಡೆಸಿರುತ್ತಾರೆ. ಆರೋಪಿತೆ ಸುಮತಿ ಅವರ ಪತಿ ನಾರಾಯಣ ದಾಸ್ ಹಾಗೂ ಮಕ್ಕಳು ಮತ್ತು ಚಂದ್ರಹಾಸ ನಲ್ಕೆ ಅವರು ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿರುತ್ತಾರೆ ಎಂದು ಹೇಮಾವತಿ ಮೋಹನ್ ಅವರು ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 210/2023 ಕಲಂ 143, 147, 447, 323, 354, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment