ಸುಳ್ಯ, ಡಿಸೆಂಬರ್ 24, 2023 (ಕರಾವಳಿ ಟೈಮ್ಸ್) : ತಾಲೂಕಿನ ಆಲೆಟ್ಟಿ ಗ್ರಾಮದ ನಿವಾಸಿ ಕಮಲಾಕ್ಷ (52) ಎಂಬವರು ಶುಕ್ರವಾರ ಸಂಜೆ (ಡಿ 22) ತನ್ನ ಮನೆಯ ಹಿಂಬದಿಯಲ್ಲಿ ಬರುತ್ತಿದ್ದಾಗ, ಆರೋಪಿ ರಾಮಣ್ಣ ನಾಯ್ಕ (77) ಎಂಬಾತ ಕತ್ತಿಯನ್ನು ಹಿಡಿದುಕೊಂಡು ಕಮಲಾಕ್ಷ ಅವರನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಕೈಯಲ್ಲಿದ್ದ ಕತ್ತಿಯಿಂದ ಹಲ್ಲೆ ಮಾಡಿದ ಪರಿಣಾಮ ಕಮಲಾಕ್ಷ ಅವರು ಗಾಯಗೊಂಡಿದ್ದಾರೆ. ಈ ಸಂದರ್ಭ ಅವರು ಬೊಬ್ಬೆ ಹೊಡೆದಿದ್ದು, ಆರೋಪಿ ಸ್ಥಳದಿಂದ ಕತ್ತಿ ಸಮೇತ ಪರಾರಿಯಾಗಿರುತ್ತಾನೆ ಎಂದು ದೂರಲಾಗಿದೆ. ಈ ಬಗ್ಗೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/2023 ಕಲಂ 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪ್ರತಿದೂರು ನೀಡಿರುವ ರಾಮಣ್ಣ ನಾಯ್ಕ (77) ಅವರು ಶುಕ್ರವಾರ ಸಂಜೆ ತನ್ನ ಮನೆಯ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಆರೋಪಿ ಕಮಲಾಕ್ಷ ಎಂಬವರು ಏಕಾಏಕಿಯಾಗಿ ಅಡಿಕೆ ಮರದ ಸಲಾಕೆಯನ್ನು ಹಿಡಿದುಕೊಂಡು ನಿನ್ನನು ಕೊಲ್ಲುತ್ತೇನೆ ಎಂದು ಹೇಳುತ್ತಾ, ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಅವರು ಬೊಬ್ಬೆ ಹಾಕಿದಾಗ ಅವರ ಪತ್ನಿ ರತ್ನಾವತಿ ಸ್ಥಳಕ್ಕೆ ಬಂದಿದ್ದು, ಆಕೆಯೂ ಹಲ್ಲೆಗೊಳಗಾಗಿ ಗಾಯಗೊಂಡಿರುತ್ತಾಳೆ ಎಂದು ದೂರಲಾಗಿದೆ. ಈ ಬಗ್ಗೆಯೂ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 142/2023 ಕಲಂ 324, 506 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಎರಡೂ ಪ್ರಕರಣ ದಾಖಲಿಸಿಕೊಂಡಿರುವ ಸುಳ್ಯ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
0 comments:
Post a Comment