ಬಂಟ್ವಾಳ, ಡಿಸೆಂಬರ್ 09, 2023 (ಕರಾವಳಿ ಟೈಮ್ಸ್) : ವ್ಯಕ್ತಿಯೊಬ್ಬರಿಗೆ ತಂಡವೊAದು ಚೂರಿಯಿಂದ ಇರಿದು ಹಲ್ಲೆ ನಡೆಸಿದ ಪ್ರಕರಣ ಕಾವಳಮುಡೂರು ಗ್ರಾಮದ ಕಾವಳಕಟ್ಟೆ ಸೊಸೈಟಿ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.
ಈ ಬಗ್ಗೆ ಕಾವಳಪಡೂರು ಗ್ರಾಮದ ನಿವಾಸಿ ಮಹಮ್ಮದ್ ಫಝೀಮ್ (31) ಅವರು ಪೊಲೀಸರಿಗೆ ದೂರು ನೀಡಿದ್ದು, ನಾನು ಗುರುವಾರ ಬೆಳಿಗ್ಗೆ ಬಂಟ್ವಾಳ ತಾಲೂಕು, ಕಾವಳಮುಡೂರು ಗ್ರಾಮದ, ಕಾವಳಕಟ್ಟೆ ಸೊಸೈಟಿಯ ಬಳಿಯಿರುವಾಗ ಆರೋಪಿ ಮಹಮ್ಮದ್ ಶಮೀಮ್ ಎಂಬಾತ ನನ್ನ ಬಳಿ ಎಚ್ ಇ ಹನೀಫ್ ಎಂಬವರ ವಿಚಾರದಲ್ಲಿ ತಕರಾರು ತೆಗೆದು ಅವ್ಯಾಚವಾಗಿ ಬೈದು, ಆತನ ಕೈಯಲ್ಲಿದ್ದ ಚೂರಿಯಿಂದ ತೋಳಿಗೆ ಇರಿದು ರಕ್ತಗಾಯಗೊಳಿಸಿರುತ್ತಾನೆ.
ಇದೇ ವೇಳೆ ಸ್ಥಳದಲ್ಲಿದ್ದ ಇತರ ಆರೋಪಿಗಳಾದ ಫಯಾಜ್, ಶರೀಫ್, ಹನೀಫ್, ಗಣಿ, ಎಚ್ ಇ ಹನೀಫ್, ಝುಬೈರ್, ರಿಶಾನ್ ಎಂಬವರುಗಳು ಸೇರಿ ಹಲ್ಲೆ ನಡೆಸಿರುತ್ತಾರೆ. ಈ ಸಂದರ್ಭ ಫಝೀಮ್ ಬೊಬ್ಬೆ ಹೊಡೆದಾಗ ಜನ ಸೇರುವುದನ್ನು ಕಂಡು ಆರೋಪಿಗಳು ಮುಂದಕ್ಕೆ ನಮ್ಮ ವಿಚಾರಕ್ಕೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ದೂರಲಾಗಿದೆ. ಆರೋಪಿಗಳಿಂದ ಹಲ್ಲೆಗೊಳಗಾದ ಫಝೀಮ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 110/2023, ಕಲಂ 143, 147, 148, 323, 324, 504, 506, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment