ಬೆಳ್ತಂಗಡಿ, ಡಿಸೆಂಬರ್ 25, 2023 (ಕರಾವಳಿ ಟೈಮ್ಸ್) : ಮಹಿಳೆಯೋರ್ವರು ತಮ್ಮ ಅಡಿಕೆ ತೋಟದಲ್ಲಿ ಫಸಲು ಕೊಯ್ಯುತ್ತಿದ್ದ ವೇಳೆ ಏಕಾಏಕಿ ನುಗ್ಗಿ ಬಂದ 20 ಮಂದಿ ಆರೋಪಿಗಳ ತಂಡವೊಂದು ದಾಂಧಲೆಗೈದು ಅಡಿಕೆ ಫಸಲು ದರೋಡೆಗೈದ ಘಟನೆ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ಶನಿವಾರ (ಡಿ 23) ಬೆಳಿಗ್ಗೆ ನಡೆದಿದ್ದು, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಶಿಬಾಜೆ ನಿವಾಸಿ ಶ್ರೀಮತಿ ಎ ಸಿ ಎಲಿಯಮ್ಮ ಕೋಂ ಟಿ ಕೆ ಮಾಧ್ಯು ಸ್ವಾನ (65) ಅವರು, ಶನಿವಾರ ಬೆಳಿಗ್ಗೆ ತನ್ನ ಸೊಸೆ ಅಡಿಕೆ ಫಸಲು ಸಂಗ್ರಹಣೆಗಾಗಿ ತೋಟಕ್ಕೆ ಹೋಗಿ ಫಸಲುಗಳನ್ನು ಗೋಣಿ ಚೀಲದಲ್ಲಿ ತುಂಬಿಸುತ್ತಿದ್ದಾಗ, ಆರೋಪಿಗಳಾದ ಟಿ ಆರ್ ಮೋಹನ, ತಂಗಮಣಿ, ವಾಸು, ಲತಾ (ವಾಸು ಅವರ ಮಗಳು), ವಿಶ್ವನಾಥ, ರವಿ, ರತೀಶಗೌಡ, ರಾಧಾಕೃಷ್ಣ, ಪುರಂದರ್ ರಾವ್, ಸುರೇಶ್ ಎನ್ ಕೆ, ಲತಿಕ, ರೇಖ, ಸುಧಾಕರ, ಆನಂದ ಗೌಡ ಬಿನ್ ಲಿಂಗಪ್ಪ ಗೌಡ, ಗಂಗಾಧರ, ಮಹೇಶ್ ಪೂಜಾರಿ, ರಾಜೇಶ್, ನವೀನ್ ನೆರಿಯ, ಪ್ರಭನ್ ಯಾನೆ ಪ್ರಭಾಕರ ಎಂಬವರುಗಳು ವಾಹನಗಳಲ್ಲಿ ಬಂದು, ಸೊಸೆಯನ್ನು ಸುತ್ತುವರಿದು, ಹಲ್ಲೆ ಮಾಡಿ ಜಮೀನಿಗೆ ಹಾಕಿದ ಬೇಲಿಯನ್ನು ಪುಡಿ ಮಾಡಿ ಸೊಸೆಯನ್ನು ಬೆದರಿಸಿ, ಸುಮಾರು ಹತ್ತರಷ್ಟು ಕಾಂಕ್ರೀಟ್ ಬೇಲಿಯ ಕಂಬಗಳನ್ನು ಅವರು ತಂದಿದ್ದ ಟೆಂಪೆÇೀದಲ್ಲಿ ಹಾಗೂ ಸುಮಾರು 20 ಕೆಜಿಯಷ್ಟು ಬೇಲಿಯನ್ನು ಕಾರಿನಲ್ಲಿ ಹಾಗೂ ಒಂದು ಗೋಣಿ ಅಡಿಕೆಯ ಫಸಲನ್ನು ಆರೋಪಿ ರತೀಶ್ ಗೌಡನ ಕಾರಿನಲ್ಲಿ ದರೋಡೆ ಮಾಡಿಕೊಂಡು ಹೋಗಿರುತ್ತಾರೆ ಎಂದು ನೀಡಿದ ದೂರಿನಂತೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 113/2023 ಕಲಂ 143, 147, 341, 323, 427, 395 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment